|| ತತ್ವ ವಿಚಾರ ಪ್ರಕರಣ ||
![]() |
| kannadabhajanlyrics.blogspot.com |
ಸಾರುತೀದೇ ಶೃತಿ। ಸಾರುತೀದೆಲ್ಲ ॥ಪಲ್ಲವಿ॥
ಪರಮಾರ್ಥ ಜ್ಞಾನವಿಲ್ಲದೆ
ನೂರು ಸಾವಿರ ದೇಹದೊಳಗತಿ।
ಘೋರ ತಪದಿಂ ತಪ್ತನಾದರು
ತೋರದಾತ್ಮಾನಂದವೆಂದೂ ||ಅ.ಪ॥
ತನ್ನ ನಿಜವನು ತಿಳಿಯಲಾರದೆ
ಭಿನ್ನ ಭಾವನೆಯಿಂದ
ಕಲ್ಮರ ಮಣ್ಣು ಬೊಂಬೆಗಳನ್ನು ಪೂಜಿಸೆ
ಜನ್ಮ ಭಾದೆಯು ತೊಲಗದೆಂದೂ || ೧ ||
ಓದಿ ವೇದವ ಜೀವಪರಮರ
ಭೇದವಳಿಯದ ಮನುಜ।
ಧರೆಯೊಳು ವೇದ ಭಾರವ ಪೊತ್ತು
ತಿರುಗುವ ಮಾದಿಗರ ಮನೆ ಕತ್ತೆಯೆಂದೂ ||೨||
ಜಾತಿ ನೀತಿಗಳಿಲ್ಲದಾತ್ಮಗೆ
ಜಾತಿಯನು ಕಲ್ಪಿಸುತ
ಕರ್ಮದ ಮಾತನಾಡುವ ನರನೆ
ಕಾಲನ ದೂತ ಪಾಶಕೆ ಬದ್ದನೆಂದೂ ||೩||
ಸಕ ಕಂದ ಮೂಲವ ತಿಂದು ನದಿಯೊಳು
ಮಿಂದು ಬೂದಿಯ।
ಧರಿಸಿ ಪಿಟಿಪಿಟಿ ಎಂದು
ಮಂತ್ರವ ಜಪಿಸಿದರು ಭವ
ಬಂಧವೆಂದಿಗು ತೊಲಗದೆಂದೂ ||೪||
ತತ್ವಮಸಿ ವಾಕ್ಕಾರ್ಥದೊಳಗಿನ
ತತ್ವ ವರಿಯದೆ ಶಂಭು।
ಪೂಜೆಯ ಹತ್ತು ಸಾವಿರ ವರುಷ
ಗೈದರು ಮೃತ್ಯುವೆಂದಿಗು ತಪ್ಪದೆಂದೂ ||೫||
ತನುವೆ ತಾನೆಂದರಿತು ತನ್ನೊಳು
ತನುವಿಗುಸುರಿದ ಜಾತಿ।
ಕರ್ಮವ ನೆಣಿಸಿ ಕರ್ಮಾಗ್ನಿಯಲಿ ಬೇಯುವ
ಮನುಜನಿಗೆ ಭವ ತೊಲಗದೆಂದೂ ||೬||
ನಾನು ನೀನದಿದೆಂಬ ಭಾವಗಳೇನು ತೋರದೆ ಸಚ್ಚಿ
ದಾನಂದಾನುಭವ ಸುಜ್ಞಾನ ತಳದಿಹ
ಮಾನವನೆ ಪರಮಾತ್ಮನೆಂದೂ ||೭||
ಸತ್ಯ ವಸ್ತುವ ಮರೆತು ಮಿಥ್ಯೆಯ ಸತ್ಯವೆಂದುಸುರುತ್ತ|
ಕರ್ಮಕೆ ಭೃತ್ಯರಾಗಿಹ ಮೂಢ ಮನುಜರು
ಸತ್ತು ಜನಿಸುತ್ತಿರುವರೆಂದೂ ||೮||
ನಾರಿ ಒಲಿದೊಡೆ ಪತಿಯ
ಮನಕನು ಸಾರಮಾಗಿರುತಿಹಳು |
ಮುನಿದೊಡೆ ಮಾರಿಸುವಳವ ನೊಡಲದನದರಿಂ
ನಾರಿಯೇ ಹಿರಿ ಮಾರಿಯೆಂದೂ || ೯ ||
ಸಾಯುವರು ದುಃಖಾಗ್ನಿಯಲಿ
ಕಡು ಬೇಯುವರ ನೋಡುತ್ತ
ಎನಗೀ ಕಾಯ ಸುಸ್ಥಿರವೆಂದು ನಂಬಿದ
ನಾಯಿಗುಂಟೇ ಸೌಖ್ಯವೆಂದೂ ||೧೦||
ಬಾಧೆಗೊಳಿಸುತ ತನುವ ಸಮ್ಯಗ್ಬೋಧೆಯಿಲ್ಲದೆ ಬಹು।
ವ್ರತಂಗಳ ಸಾಧಿಸಿದರದರಿಂದಲೀ ಭವ
ಭಾದೆಯೆಂದಿಗು ತೊಲಗದೆಂದೂ || ೧೧ ||
ಎಷ್ಟು ದಿನ ಧರೆಯೊಳಗೆ ಬಾಳ್ದರೂ ನಷ್ಟವಾಗದೇ।
ನಿಲ್ಲದೀ ತನು ಭ್ರಷ್ಟರಿದನರಿತರಿತು ತತ್ತ
ಬಿಟ್ಟು ಬರಿದೇ ಕೆಟ್ಟರೆಂದೂ || ೧೨ ||
ಸ್ವರ್ಗ ಭೋಗವ ಬಯಸಿ ನಿರ್ಮಲ
ನಿರ್ಗುಣಾದ್ವಯ ವಸ್ತುವನು
ಹರಿ ಭರ್ಗನಾಮದಿ ಪೂಜಿಸುವಗ
ಪವರ್ಗವೆಂದಿಗು ದೊರೆಯದೆಂದೂ ||೧೩||
ಪರಮ ಸದ್ಗುರು ಶಂಕರಾರ್ಯನ
ಚರಣ ಕಮಲವ ಹಿಡಿದು |
ತತ್ತ್ವವನರಿತು ಬ್ರಹ್ಮಾನಂದದೊಳಗಿಹ
ನರನೇ ಸಾಕ್ಷಾಧೀಶನೆಂದೂ ||೧೪||

0 ಕಾಮೆಂಟ್‌ಗಳು