||ಅತಿಶೋಭಿಸುತಿದೆ ಶ್ರೀಪತಿಯ ವಾಹನ||
ಅತಿ ಶೋಭಿಸುತಿದೆ ಶ್ರೀ ಪತಿಯ ವಾಹನನಾ
ಚತುರದಶಾಲೋಕಕ್ಕೆ ಪಶಿಮ ವಾಹನಾ ॥
ಕಾಲ ನಾಮಕನಾಗಿ ಕಮಲ ಭವನಲಿ ಒವಿಸಿ
ಕಾಲಾತ್ಮಕ ಹರಿಯ ಸೇವಿಪ ವಾಹನಾ
ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನಾ
ವಾಲಖಿಲ್ಯರ ವರವ ಪಡೆದಿಹ ವಾಹನಾ
ಏನುತ ಕಣ್ಯಪ ಋಷಿಯ ತನಯನೆಸಿದ ವಾಹನ
ಅನುಜರ ಕದ್ದೊಯ್ದ ಆಡ್ಯ ವಾಹನಾ
ಮನದಿ ಮಧ್ಯದಿ ಆವುಕರಿ ಭಕ್ಷಿಸಿದ ವಾಹನಾ
ಜನಕನಾಜ್ಞದಿ ಕೂರ್ಮ ಗಜನುಂಗಿದ ವಾಹನಾ
ಕೂಪಾರ ದೆಡೆಗೆ ಮಂದಾರ ಒಯ್ದ ವಾಹನ
ನಿಜರೂಪದಿ ಹರಿಸೇವೆ ಗೈಯ್ದ ವಾಹನಾ
ಸಾಪತ್ನಿಯರಿಗೆ ಅಮೃತ ಪ್ರಾಪ್ತಮಾಡಿದ ವಾಹನಾ
ಸೌಪರ್ಣಿ ಪತಿಯೆಂಬ ಪೊಂಬಣ್ಣ ವಾಹನ
ಕುಲಿಶ ಪಾಣಿಯರೊಡನೆ ಕಲಹ ಮಾಡಿದ ವಾಹನ
ಒಳ ಹೊಕ್ಕು ಪೀಯಾಷಾ ತಂದ ವಾಹನ
ಮಲತಾಯಿ ಮಕ್ಕಳನು ಮರಳುಗೊಳಿಸಿದ ವಾಹನ
ಬಲಿರಾಜನೊಯ್ದ ಮಕುಟವ ತಂದ ವಾಹನ
ಪನ್ನಗಾಶನನಾದ ಪತಿತಪಾವನ ವಾಹನ
ಸನ್ನುತಿಪ ಸಜ್ಜನರ ಪೊರವ ವಾಹನ
ಪನ್ನಗಾಚಲ ವಾಸ ಜಗನ್ನಾಥ ವಿಠ್ಠಲಗೆ
ಉನ್ನತ ಪ್ರಿಯವಾದ ಗರುಡ ವಾಹನ

0 ಕಾಮೆಂಟ್‌ಗಳು