|| ಸುಬ್ರಹ್ಮಣ್ಯ ಸ್ತುತಿ ||
ಸ್ವಾಮಿ ಷಣ್ಮೂಖ ಸ್ಮಂದನ್ನೋಡು ಬಾರೇ ತಂಗಿ
ಇವ್ನಂತ ದೇವನಿಲ್ಲ ಬೇಡು ಬಾರೇ ತಂಗಿ ||ಪ||
ಅವತಾರ ಪುರುಷಾ ಸ್ವಾಮಿಯಂತೇ ಇವ
ಚರಿತಾವ ಬಲ್ಲ ಪುರುಷ ಪರಿಲ್ಲವಂತೇ ತಂಗಿ
ನೀರಿನೋಳಿರುವ ದೈವವಂತೇ ಇವ ಶರಧೀಯೋಳ್
ಮಲಗೀ ಇಹನಂತೆ ತಂಗಿ
ಪಾತಳದಲಿ ಇವನ ಮನೆಯಂತೆ ಭೂತಾಯಿ
ಇವನ ತಲೆಯಲಿಹಳಂತೆ ತಂಗಿ
ಸಿಟ್ಟೀನ ನಾಗಪ್ಪ ಸರ್ಪ ಹೌದೇ ಇವ
ಸುತ್ತೀದ ಹಾವಿನ ರೂಪದಲ್ಲೇ ತಂಗಿ
ಕಪ್ಪಾಗಿರುವ ತಾಯ ಕಾಣೇ ಇವಗೊಪ್ಪಾಗಿ
ಹಮ್ಮಯ್ಯ ಬಾವ ನೋಡೇ ತಂಗಿ
ಅನ್ಕೋನ್ಯ ಸ್ನೇಹದಾ ಮೂರ್ತಿಯಂತೇ ಇವ
ಗ್ಹನ್ನರ ಡಾಭುವ ಶಿರವಂತೆ ತಂಗಿ
ಆರೇಳು ಮುಖದಾ ದೇವನಹುದೇ ಇವ
ಮೂರು ಲೋಕದ ಪಾಲನಹುದೆ ತಂಗಿ
ಸುಬ್ರಾಯಸ್ವಾಮಿ ಹೆಸರಂತೇ ಇವ
ಅದ್ಭೂತಾಕಾರದ ವಿಗಹವಂತೇ ತಂಗಿ
ಶೇಷಾ ಷಣ್ಮುಖ” ಸಂದ ದೇವನಂತೆ ಇವ
ವಾಸೂಕಿ ಪನ್ನಗ ಗುಹ ಗುರುವಂತೆ ತಂಗಿ
ವಾಸಿಪ ನರಸಿಂಹರಾಜಪುರದಲ್ಲೇ ಇವ
ವೀಕ್ಷಿಸಿ ಶಂಕರ ಹೃದಯದಲ್ಲೇ ತಂಗಿ
ಶಾರದ ವಿರಚಿತ ಕೃತಿಯಲ್ಲೆ ಇವ
ಅರಗ ಕುಲದಾ ಮೂಲದಲ್ಲ ತಂಗಿ
ಮಂಗಳ ಜಯ ಜಯ ಜಯ ಹಾಡೇ ತಂಗಿ
ಮಂಗಳ ಜಯ ಜಯ ವರಬೇಡೇ
0 ಕಾಮೆಂಟ್‌ಗಳು