|| ಸುಬ್ರಹ್ಮಣ್ಯ ಸ್ತುತಿ||
ಏಳು ಸುಬ್ರಹ್ಮಣ್ಯ ಏಳು ಜಗದಾಗ್ರಣ್ಯಾ
ಏಳು ಏಳಯ್ಯಾ ಬೆಳಗಾಯಿತೂ ||ಪ||
ರವಿ ಮೂಡಿ ಮೇಲೇರಿ ಬೆಳಗುತಿಹುದು ನೋಡಾ
ಜನದೊಡೆಯನೆ ದೇವ ಬೆಳಗಾಯಿತೂ ||೧||
ಆರು ಮುಖದ ದೇವ ನೂರು ಸಿರದವನೇ
ಧಾರುಣಿ ಧರ ಸ್ವಾಮಿ ಬೆಳಗಾಯಿತೂ ||೨||
ತೊಳೆ ಮುಖ ಪದ್ಮವಾ ತಿಳಿನೀರು ತಂದಿಹೇ
ಕಳೆ ಮುಖವನೆ ತೋರು ಬೆಳಗಾಯಿತೂ ||೩||
ಬಾಗಿಲೊಳು ಭಕ್ತ ಬಾಂಧವರಿಹರಯ್ಯಾ
ಕಾಳಾಹಿ ಭದ್ರನೇ ಬೆಳಗಾಯಿತೂ ||೪||
0 ಕಾಮೆಂಟ್‌ಗಳು