ಆಂಜನೇಯ ವಂದಿಪೆನಯ್ಯ
kannadabhajanlyrics.blogspot.com |
ಆಂಜನೇಯ ವಂದಿಪೆನಯ್ಯ |
ಅಂಜಿಕೆಯ ಪರಿಹರಿಸಯ್ಯ |
ಮಂಜುಳಾಂಗ ರಾಮನ ಜೀಯ |
ಕಂಜ ಚರಣವ ತೋರಿಸಯ್ಯ ||ಪ||
ಕಾಡುವದೆನ್ನ ಮೋಹಮಾಯ |
ಮಾಡಲೇನು ಇಲ್ಲ ಧೈರ್ಯ ||
ಬೇಡುವೆನಿನ್ನ ಮಾರುತಿ ರಾಯ
ಓಡಿ ಬಾ ಹಿಡಿ ಎನ್ನ ಕೈಯ ||೧||
ಕಾಮ ಕ್ರೋಧಾದಿಗಳ ಬಿಡಿಸು |
ನೇಮ ನಿಷ್ಠೆಯ ಹಾದಿಯ ಹಿಡಿಸು |
ರಾಮ ನಾಮದ ರುಚಿಯ ಕುಡಿಸು |
ರಾಮ ಧ್ಯಾನವ ಮನದೊಳಗಿರಿಸು ||೨||
ವಿದ್ಯಾ ಬುದ್ಧಿ ಇಲ್ಲ ಎನಗೆ |
ನಿದ್ರಾಲಸ್ಯ ತುಂಬಿದೆ ಒಳಗೆ |
ಬಿದ್ದೆನು ಕಾಲಿಗೆ ಹೇಳಿನ್ನೆನಗೆ |
ಹೃದ್ಯ ರಾಮನ ಕಾಂಬುದು ಹೇಗೆ ||೩||
ಮೊರೆ ಹೊಕ್ಕಿರುವೆ ಹನೂಮಂತ |
ಕರುಣದಿ ತೋರಿಸು ಭಕ್ತಿಯ ಪಂಥ |
ಹರಿ ಸಚ್ಚಿದಾನಂದ ಸೀತಾಕಾಂತ |
ಶರಣನ ಮಾಡಿಸು ಸದ್ಗುಣವಂತ ||೪||
0 ಕಾಮೆಂಟ್‌ಗಳು