|| ರಾಮಾಯಣ ರಹಸ್ಯ ||
ರಚನೆ - ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು
ಅಡಗಿದೆ ರಾಮಾಯಣದಲಿ ರಹಸ್ಯವೂ
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||ಪಲ್ಲವಿ||
ಮಾನವಜೀವಕೆ ಸುತ್ತು ಗಟ್ಟಿದೆ
ತಮೋಗುಣದಿಂದ ರಾಕ್ಷಸರು - ರಾಕ್ಷಸರು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೧||
ಅಂತರಂಗದಲ್ಲಿ ಶುದ್ಧವಾದರೆ
ರಾಕ್ಷಸ ತಮೋಗುಹಣಾ ಸಂಹಾರವಾಯಿತು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೨||
ಬುದ್ದಿಯೊಳಗೆ ಪ್ರತಿಬಿಂಬನಾದನು
ರಾಮನು ಶ್ರೀ ರಾಮನು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೩||
ಮನಸ್ಸಿನಲ್ಲಿ ಚೈತನ್ಮರೂಪವೆ ಲಕ್ಷ್ಮಣನು - ಲಕ್ಷ್ಮಣನು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೪||
ಅಹಂಕಾರದಲ್ಲಿ ಬಿಂಬ ಚೇತನ
ತಮ್ಮ ಭರತನು - ತಮ್ಮ ಭರತನು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೫||
ಚಿತ್ತದೊಳಗೆ ಪ್ರತಿಬಿಂಬ ಚೇತನ ಶತೃಘ್ನ - ಶತೃಘ್ನ
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೬||
ದಶವಶ ಇಂದ್ರಿಯ ಜೀವನಾಟ್ಕನು
ದಶರಥನು - ದಶರಥನು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೭||
ಕೌಸಲ್ಯಾ ಜ್ಞಾನ ಸುಮಿತ್ರಾ ಕ್ರಿಯಾ ಇಚ್ಛಾಶಕ್ತಿಯೇ
ಕೃಕೇಯ ಆದರು - ಕೈಕೇಯಿ ಆದರು
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೮||
ಜ್ಞಾನದಾ ಆಟಆಡಿದ ವಶಿಷ್ಠಾ
ಸಚಿದಾನಂದನ ಕ್ಷೇತ್ರದಲ್ಲಿ
ರಾಮ ರಾಮ ಶ್ರೀ - ರಾಮ ರಾಮ ಶ್ರೀ ||೯||
ಇದುವೆ ರಹಸ ಇದುವೆ ರಹಸ
ಇದುವೆ ರಹಸ್ಯ ಇದುವೆ ರಹಸ್ಯ
0 ಕಾಮೆಂಟ್‌ಗಳು