|| ತತ್ವವಿಚಾರ ಪ್ರಕರಣ ||
kannadabhajanlyrics.blogspot.com |
ಸುಮ್ಮನಾಗದು ನಿಜಾನಂದ |
ಬಾಯ ಬೊಮ್ಮವ ನುಡಿಯೆ ತಪ್ಪದು ಭವಬಂಧ॥ಪ॥
ಕಾಮಾದಿಗಳನ್ನೆಲ್ಲ ಬಿಡದೇ। ಪುಸಿನಾಮ ರೂಪಗಳ।
ಭ್ರಾಂತಿಯ ಮೂಲ ಕೆಡದೇ|ತಾಮಸ ವೃತ್ತಿಯ ಸುಡದೇ|
ಸರ್ವಂ ಪ್ರೇಮ ಸ್ವರೂಪವೆಂಬುವ ಭಾವ ಬರದೇ॥ ೧
ನಾನು ನೀನೆಂಬುದನಳಿದು। ದ್ಯಾತೃ।
ಧ್ಯಾನ ಧ್ಯೇಯಗಳೆಂಬ ತ್ರಿಪುಟಿಯ ಕಳದೂ।
ನಾನತ್ವ ಭಾವವ ತೊರದೂ।
ಸಮ್ಯಜ್ಞಾನದಿಂ ಶಿವನೆ ತಾನಾಗದೆ ಬರಿದೆ॥ ೨ ||
ಹಿತ ಶತೃಗಳು ಸಮವೆನಿಸಿ ನಿಂದೆ।
ಸ್ತುತಿಗಳೆರಡನು ತಾನೊಂದಾಗಿ ಗಣಿಸಿ।
ಮತಿಗೆ ಧೃಡತೆಯಳವಡಿಸಿ|ಭೇದ ಗತಿಯ ಮರಸುವ।
ಸುಜ್ಜಾನ ಮುದಿಸದೇ।| ೩ ||
ಚೆನ್ನಾಗಿ ತಿಳಿದು ತತ್ತ್ವವನೂ।
ಎಲ್ಲ ತನ್ನಂತೆ ಭಾವಿಸಿ ತೊರೆದು ಕ್ರೋಧವನೂ।
ಮುನ್ನಿರ್ದ ಭೇದಭಾವವನು।
ಬಿಟ್ಟು ಹೊನ್ನಿನಂದದಿ ಶುದ್ಧನಾಗದೆ ಬರಿದೇ॥ ೪ ||
ಕರಣ ತತ್ವಗಳ ತಿಳಿಯದೇ | ಕಾಯ।
ಕರಣ ಕಾರ್ಯಗಳೆನ್ನದೆಂಬುದು ಕೆಡದೇ।
ಪರಜೀವ ಭೇದವಳಿಯದೇ |
ತಾನು ಗುರುಶಂಕರಾರ್ಯನ ಪದದಿ
ಬೆರೆಯದೆ ॥ಸುಮ್ಮನಾಗದು॥ ೫
0 ಕಾಮೆಂಟ್‌ಗಳು