|| ಶ್ರೀರಾಮ ಸುಪ್ರಭಾತ ||
ರಾಗ : ಭೌಳಿ
ತಾಳ : ಆದಿ
ಅಂಗಳದ ಮುಂಬೆಳಕು ತಂಗಾಳಿಬೀಸುತಿದೆ |
ಬೃಂಗವದು ರೇಂಕರಿಸಿ | ಬೀಸುದೆಯು ಬೀರುತಿದೆ |
ಶೃಂಗಾರ ಸುಪ್ರಭಾತಾಹ್ಹಾನಿಸಿದೆ ರಾಮ | ಆ... ಆ.. ಆ...
ಮೂಡಣದೆಸೆಯಲಿ ಮಂಗಳದೋಕುಳಿ ।
ಚೆಲ್ವ ಉಷೆಯು ಮಿಂದು | ಮೂಡಿ ಬಂದಳೋ
ಇಳೆಗೆ ತಂದಳೋ | ಭಾನು ಬರುವನೆಂದು |
ಊ...ಊ..ಊ.. ಯಜ್ಞವಲ್ಕರಿಂದಾರಾಧಿತ ಆದಿತ್ಯ
ಹೃದಯ ದೇವಾ | ...ಆ...ಆ...ಆ...
ಪ್ರಾಜ್ಞನಾಗಿಸೆನ್ ಆತ್ಮ ಬೆಳಗಿಸೈ |
ತಮೋಹರೆನೇ ಕಾವಾ | ಅ...ಆ..ಆ... ಇ
ನಮೋ ಬ್ರಹ್ಮನೇ ನಮೋ ರುದ್ರನೇ|ನಮೋ ವಿಷ್ಣು ರೂಪ |
ನಮೋ ಸತ್ಯನೇ ನಮೋ ನಿತ್ಯನೇ | ನಮಿಪೆ ನಿನ್ನ ದಾಸ |
ಎಚ್ಚರಗೊಳು ರಾಮ | ನೀ ಕಣ್ಗಳ ತೆರೆ ರಾಮ ||ಪ||
ಸಚ್ಚಿದಾನಂತನು ಎಚ್ಚರ ಗೊಳುತಿರೆ |
ಅಚ್ಚರಿ ಪಡುತಿದೆ ಮೂರ್ಜಗವೋ ॥ ಅ.ಪ.||
ಮೂಡಣದಲಿ ಪ್ರಭೆ ತೋರುತಿದೆ |
ವೇದದೆ ಘೋಷವು ಕೇಳುತಿದೆ |
ವೀಣೆಯು ಉದಯವೆ ಹಾಡುತಿದೆ ।
ಕೋಗಿಲೆ ನಿನ್ನನು ಪಾಡುತಿದೆ. ॥. ಎಚ್ಚರಗೊಳು ೧.
ಚಕ್ರವಾಕ
ಸುರರೆಲ್ಲರು ನಿನ್ನಯ ದರುಶನಕೆ |
ಹರುಷದಲೀ ತಾವ್ ಬಂದಿಹರೋ ।
ಜನಕನ ಸುತೆ ತಾ ನಿನ್ಷಯ ಸೇವೆಗೆ |
ನಗುತಲಿ ನಲಿಯುತ ಬಂದಿಹಳೋ | ಎಚ್ಚರಗೊಳು ೨.
ಅಮೃತ ವರ್ಷಿಣಿ
ತಂದೆಯ ಪದವಿಯು ಕಂದಗೆ ಕೊಡಲು ।
ಚೆಂದದಲೀ ತಾವ್ ಬಂದಿಹರೋ |
ಮಂಥರೆ ಬಲೆಯೊಳು ಸಿಲುಕಿದ ಕೈಕೆ |
ವಿಪಿನಕೆ ಕೆಳುಹಲು ಕಾದಿಹಳೋ ॥ ಎಚ್ಚರಗೊಳು||೩.
ಸುಮನಸ ರಂಜಿನಿ
ಅಸುರರ ಭಾದೆಗೆ ಬಳಲಿ ಭೂ ದೇವಿಯು |
ನಡುಗುತಲೀ ತಾ ಬಂದಿಹಳೋ।
ಅಸುವನು ನೀಗುವುದೆಂದಿಗೋ ಎನುತ |
ದಶಮುಖನು ತಾ ಕಾದಿಹನೋ ॥ ಎಚ್ಚರಗೊಳು||೪.
0 ಕಾಮೆಂಟ್‌ಗಳು