ತತ್ವ ವಿಚಾರ ಪ್ರಕರಣ - ಸುಮ್ಮನಾಗದು ನಿಜಾನಂದ ಬಾಯ ಬೊಮ್ಮವ ನುಡಿಯೆ

|| ತತ್ವ ವಿಚಾರ ಪ್ರಕರಣ ||

kannadabhajanlyrics.blogspot.com
kannadabhajanlyrics.blogspot.com



ಸುಮ್ಮನಾಗದು ನಿಜಾನಂದ |

ಬಾಯ ಬೊಮ್ಮವ ನುಡಿಯೆ ತಪ್ಪದು ಭವಬಂಧ ॥ಪ॥ 


ಕಾಮಾದಿಗಳನ್ನೆಲ್ಲ ಬಿಡದೇ। ಪುಸಿನಾಮ ರೂಪಗಳ।

ಭ್ರಾಂತಿಯ ಮೂಲ ಕೆಡದೇ|ತಾಮಸ ವೃತ್ತಿಯ ಸುಡದೇ।

ಸರ್ವಂ ಪ್ರೇಮ ಸ್ವರೂಪವೆಂಬುವ ಭಾವ ಬರದೇ॥ ೧ 


ನಾನು ನೀನೆಂಬುದನಳಿದು ದ್ಯಾತೃ।

ಧ್ಯಾನ ಧ್ಯೇಯಗಳೆಂಬ ತ್ರಿಪುಟಿಯ ಕಳದೂ।

ನಾನತ್ವ ಭಾವವ ತೊರದೂ।

ಸಮ್ಯಜ್ಞಾನದಿಂ ಶಿವನೆ ತಾನಾಗದೆ ಬರಿದೆ ॥ ೨ ||


ಹಿತ ಶತೃಗಳು ಸಮವೆನಿಸಿ ನಿಂದೆ |

ಸ್ತುತಿಗಳೆರಡನು ತಾನೊಂದಾಗಿ ಗಣಿಸಿ |

ಮತಿಗೆ ಧೃಢತೆಯಳವಡಿಸಿ | ಭೇದ ಗತಿಯ ಮರಸುವ।

ಸುಜ್ಞಾನ ಮುದಿಸದೇ।| ೩ ||


ಚೆನ್ನಾಗಿ ತಿಳಿದು ತತ್ತ್ವವನೂ।

ಎಲ್ಲ ತನ್ನಂತೆ ಭಾವಿಸಿ ತೊರೆದು ಕ್ರೋಧವನೂ।

ಮುನ್ನಿರ್ದ ಭೇದಭಾವವನು।

ಬಿಟ್ಟು ಹೊನ್ನಿನಂದದಿ ಶುದ್ಧನಾಗದೆ ಬರಿದೇ॥ ೪ ||


ಕರಣ ತತ್ವಗಳ ತಿಳಿಯದೇ। ಕಾಯ।

ಕರಣ ಕಾರ್ಯಗಳನ್ನದೆಂಬುದು ಕೆಡದೇ।

ಪರಜೀವ ಭೇದವಳಿಯದೇ।

ತಾನು ಗುರುಶಂಕರಾರ್ಯನ ಪದದಿ ಬೆರೆಯದೆ ॥

||ಸುಮ್ಮನಾಗದು॥ ೫ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು