|| ಶ್ರೀರಾಮ ಸ್ತುತಿ ||
ರಾಗ : ಆನಂದಭೈರವಿ
ತಾಳ : ಆದಿ
ಶ್ರೀರಾಮನೆಂಬೋ|ನಾಮವ ನೆನೆದರೆ|
ಭಯವಿಲ್ಲಾ ಮನಕೆ|
ಮೂರು ಲೋಕಕೆ|ಕಾರಣಕರ್ತಾ|
ನಾರಾಯಣ ಜಗಕೆ॥ಪ.
ಮತ್ಸ್ಯವತಾರವ ತಾಳಿದ ರಾಮಾ|
ವೇದವ ತರುವುದಕೆ |
ಭೂಮಿಯ ಪೊಕ್ಕು ನೀರೊಳು ಮುಳುಗಿದ|
ವರಹವತಾರಕ್ಕೆ||೧.
ಭೂಮಿ ದಾನವ ಬೇಡಿದ ರಾಮಾ|
ವಾಮ್ನವತಾರಕ್ಕೆ |
ಕರುಳನು ಬಗೆದು ಮಾಲೆಯ ಧರಿಸಿದ|
ಭಕ್ತನ ಸಲಹಲ್ಕೇ|೨.
ಅರಣ್ಯವಾಸವ ಮಾಡಿದ ರಾಮಾ|
ಜನಕನ ವಾಕ್ಯಕ್ಕೆ|
ಮಾವ ಕಂಸನ ಕೊಂದನು ಕೃಷ್ಣಾ|
ತಾಯಿಯ ಬಿಡಿಸಲೇ||೩
ಸತಿಯರ ವ್ರತಗಳನಳಿಸಿದ ಕೃಷ್ಣಾ|
ತ್ರಿಪುರರ ಗೆಲುವುದಕೆ|
ವಾಹನ ಬಿಟ್ಟು ತುರಗವ ನೇರಿದ|
ಕಲ್ಯವತಾರಕ್ಕೆ||೪.
ಶ್ಯಾಮಲ ವರ್ಣವ ತಾಳಿದ ರಾಮಾ|
ಸಾಮರ್ಥ್ಯನು ಜಗಕೆ |
ಸ್ವಾಮಿ ಶ್ರೀಪುರಂದರ ವಿಠಲನು ರಾಮಾ |
ಗೋವಿಂದನು ಜಗಕೇ || ೫.
0 ಕಾಮೆಂಟ್‌ಗಳು