ರಾಮ ರಕ್ಷಿಸು ಪ್ರೇಮದಿಂದಲಿ - Rama Rakshisu Premadindali

ರಾಮ ರಕ್ಷಿಸು ಪ್ರೇಮದಿಂದಲಿ

ರಾಗ. ಶಂಕರಾಭರಣ




ರಾಮರಕ್ಷಿಸು | ಪ್ರೇಮದಿಂದಲಿ |

ಕಾಮಿತಾರ್ಥ ಫಲವನಿತ್ತು | ಭೂಮಿಜಾಪತೇ ||ಪ||


ದಶರಥಸುತ | ದೇವದೇವನೆ |

ಕುಶಿಕಯಜ್ಞರಕ್ಷಕ | ಸಲಹು ಎಮ್ಮನು ||


ಸೋಮಸುಂದರ | ಶ್ಯಾಮಲಾಂಗನೆ |

ರಾಮಚಂದ್ರ ರಾಜನೆ | ಭೂಮಿಪಾಲಕ ||


ಮೌನಿಮಾನಸ | ಕಾರುಣ್ಯಾಕರ |

ಮಾನನೀಯಚರಿತ ವೀರ | ಜಾನಕೀವರ |


ನತಜನಾದರ | ನೀರಜೇಕ್ಷಣ |

ಶತಮಖಾದಿ ವೀರವಂದ್ಯ | ಶಬರ ರಾಘವ ||


ಅಹ ಇದೇನಿದು | ಆಶ್ಚರ್ಯವಾದುದು |

ರಾಮಚಂದ್ರ ನಿನ್ನ ದಯವು | ಬಾರದಿಹುದು |


ಬೇಡಬೇಡವೋ | ಬೇಟೆಯಾಟವು |

ಕಾಡ ತಿರುಗಿ ತಿರುಗಿ ಮೈ | ಬಾಡಿತಲ್ಲವೋ ||


ಶರಣನಲ್ಲವೇ ನೀ | ಕರುಣಿಯಲ್ಲವೇ |

ಅರುಣ ಕಿರಣ ತರುಣ | ಶ್ರೀರಮಣನಲ್ಲವೇ ||


ಭಯನಿವಾರಣ | ಭಾಗ್ಯದಾಯಕ |

ಕಾಮಿತಾರ್ಥ ಫಲವನಿತ್ತು | ರಕ್ಷಿಸು ರಾಮ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು