|| ತತ್ವ ಪದ ||
ರಚನೆ - ಶ್ರೀ ಶಿವರಾಮ ಶಾಸ್ತ್ರಿಗಳು
Kannadabhajanlyrics.blogspot.com |
ಎಂತು ಮುಕ್ತನಾಗಬೇಕಣ್ಣ|
ಇಂತಾದ ಮೇಳ್ತಾನೆಂತು ಮುಕ್ತನಾಗಬೇಕಣ್ಣ
ಕಂತೆ ಬೊಂತೆಗೆ ಚಿಂತೆ | ರೋಗದ ಚಿಂತೆ |
ಮುಪ್ಪಿನ ಚಿಂತೆ | ಬಡತನ ಚಿಂತೆ | ಸತ್ತರೆ ಚಿಂತೆ |
ಈ ಪರಿ ಚಿಂತೆಯೆಂಬೀ ಸಂತೆಯೊಳ್ತಾನ್ || ೧ ||
ಚಿಕ್ಕಪುಟ್ಟವರಿಲ್ಲದಿಹ ಚಿಂತೆ
ನೆರೆಹೊರೆಯ ಮನೆಯೊಳು
ಒಕ್ಕಲಿರುವರ ಮಾತುಗಳ ಚಿಂತೆ
ಮಕ್ಕಳಾಗದ ಚಿಂತೆ ಬಳಿಕ ಮಕ್ಕಳಿಗೆ
ದಿಕ್ಕೆಂಬ ಚಿಂತೆಯು ಮಕ್ಕಳೆಲ್ಲ ಒಕ್ಕಲ್ಲೋಗಲು
ಬಿಕ್ಕಿ ಬಿಕ್ಕಿ ಅಳುವ ಚಿಂತೆ || ೨ ||
ಹೋಮ ನೇಮ ಸ್ಮಾನಗಳ ಚಿಂತೆ
ಮನದೊಳಗೆ ಪುಟ್ಟುವ
ಕಾಮಿತಾರ್ಥಗಳಿಲ್ಲದಿಹ ಚಿಂತೆ
ಭಾಮೆ ಇಲ್ಲದ ಚಿಂತೆ ಭಾಮೆಗೆ ಪ್ರೇಮವಿಲ್ಲದ ಚಿಂತೆ
ಪ್ರೇಮಕೆ ಹೇಮವಿಲ್ಲದ ಚಿಂತೆ
ಹೇಮಕೆ ಭೂಮಿಯಿಲ್ಲದ ಚಿಂತೆಯೊಳಾನ್ || ೩ ||
ದಿಕ್ಕು ತೊರದೆ ದುಃಖಿಸುವ ಚಿಂತೆ
ಗುರು ಶಂಕರಾರ್ಯರ ಸಿಕ್ಕು ತಿಳಿಯದೆ
ಲೆಕ್ಕಿಸುವ ಚಿಂತೆ ಅಕ್ಕಿಯಿಲ್ಲದ ಚಿಂತೆ
ಅಕ್ಕಿಗೆ ರೊಕ್ಕವಿಲ್ಲದ ಚಿಂತೆ
ರೊಕ್ಕವು ಸಿಕ್ಕಲಿಲ್ಲದ ಚಿಂತೆ ಸಿಕ್ಕಲು
ಮುಕ್ಕ ತಾನಾಗಿರುವ ಚಿಂತೆ ||೪||
0 ಕಾಮೆಂಟ್‌ಗಳು