ಘನಶ್ಯಾಮ ಸುಂದರ
ಘನಶ್ಯಾಮ ಸುಂದರ ಚಿರ ಪ್ರೇಮಸಾಗರ
ಜಯ ಗೋವಿಂದ ಸುಗುಣಾಕರ
ಮಹದಾನಂದ ಚಿನ್ಮಂದಿರಾ ||
ಶೌರಿ ಗಿರಿಧಾರಿ ಮಹಾಮಹಿಮ
ಭಕುತ ವಿಚಾರಿ ದಯಾಭರಿತ
ಜಯ ಸನ್ನುತ ಮಹದುನ್ನುತಾ ಭಾರ ಶ್ರೀಕರ ||೧.
ಯೋಗಿ ಜನಪಾಲ ಸದಾ ವಿನುತಾ
ಕರುಣ ವಿಶಾಲ ಸುಧಾ ಚರಿತ
ನಿನ್ನ ಕಾಣುವ ನಿನ್ನ ಸೇರುವ
ಮನ ನೀಡು ಮಾಧವ || ೨.
ಕೃಷ್ಣಾನಂದ ಮುಕುಂದ ಮುರಾರಿ
ಪಾವನ ಮಾಧವ ಗೋವಿಂದ
ಶ್ರೀಧರ ಕೇಶವ ರಾಘವ ವಿಷ್ಣೋ
ಲಕ್ಷ್ಮಿ ನಾಯಕ ನರಸಿಂಹ || ೩.
0 ಕಾಮೆಂಟ್‌ಗಳು