|| ಶ್ರೀರಾಮ ಸ್ತುತಿ ||
ರಾಗ : ಸಿಂಧು ಭೈರವಿ
ತಾಳಃ ಏಕ
ರಾಮ ರಾಮ ರಾಮ ರಾಮ ರಾಮ ರಾಮ ರಾಮ್ |
ರಾಮ ರಾಮ ರಾಮ ರಾಮ ರಾಮ ರಘು ರಾಮ್||ಪ:
ಜಾನಕಿ ಮನೋಹರಾ|ಜ್ಞಾನದಾತ ರಾಮ್ |
ಪ್ರೇಮ ಕರುಣ ಸಾಗರಾ|ಕೋದಂಡ ರಾಮ್ |
ಶ್ಯಾಮ ಸುಂದರಾಂಗ ವದನ|ಕೋಮಲಾಂಗ ರಾಮ್|
ಜ್ಞಾನ ಸುಧೆಯನೀವ ತಂದೆ|ದಾಶರಥಿ ರಾಮ್ || ೧:
ಭಕ್ತಿ ಪ್ರಿಯನೆ ಮುಕ್ತಿದಾತ | ಹನುಮಪ್ರಿಯನೆ ರಾಮ್ |
ಭಕ್ತ ಜನ ಮಂದಾರನೆ | ಶ್ರೀ ರಘು ರಾಮ್ |
ತಂದೆ ತಾಯಿ ರಾಮ ನೀನು|ಬಂಧು ಬಳಗವು ರಾಮ್ |
ಬಂದು ಎಮ್ಮ ತಂದೆ ಸಲಹೊ|ವೀರ ಹನುಮನೆ ರಾಮ್ ||೨:
ಹಿಂದು ಮುಂದಿನರಿವು ಇಲ್ಲ|ದಾರಿ ತೋರೊ ರಾಮ್|
ಭವ ಬಂಧನದಿಂದ ಬಿಡಿಸೊ|ಎಮ್ಮ ಪಟ್ಟಾಭಿ ರಾಮ್|
ಜೈ ಜೈ ರಾಮ್ ಸೀತಾ ರಾಮ್ |
ರಘುಪತಿ ರಾಘವ ರಾಜಾ ರಾಮ್ ||
ಜೈ ಜೈ ರಾಮ್ ಸೀತಾ ರಾಮ್ |
ರಘುಪತಿ ರಾಘವ ರಾಜಾ ರಾಮ್ ||೩.
0 ಕಾಮೆಂಟ್‌ಗಳು