ಶ್ರೀರಾಮ ಸ್ತುತಿ - ಕಪಿ ಕುಲೇಶ ಹನುಮ ವರದ ರಾಮಚಂದ್ರನಾ

|| ಶ್ರೀರಾಮ ಸ್ತುತಿ ||


ರಾಗಃ ಸಿಂಧುಭೈರವಿ

ತಾಳ: ಏಕ




 ಕಪಿ ಕುಲೇಶ ಹನುಮ ವರದ | ರಾಮಚಂದ್ರನಾ |

ವಿಪುಲನಾಮವನ್ನು ಬಿಡದೆ | ಜಪಿಸೋ ಮಾನವಾ |

ಜಪಿಸೊ ಮಾನವಾ || ಪ ||


ಬಾಲ್ಯದಲ್ಲಿ ಕೌಶಿಕ ಋಷಿಯ ಮಖವ ಸಲಹಿದಾ |

ಫಾಲನೇತ್ರ ಶಿವನ ಧನುವ | ಮುರಿದು ಕೆಡುಹಿದಾ |

ಶೂರತನದಿ ಸೀತೆಯನ್ನು ಮದುವೆಯಾಗುತಾ |

ವೀರ ಪರಶುರಾಮನನ್ನು ಭಂಗಪಡಿಸಿದಾ ||೧||


ಪಿತನ ನೇಮದಿಂದ ವನಕೆ | ಹಿತದಿ ತೆರಳಿದಾ

ಸತತ ದುಷ್ಟ ದನುಜರನ್ನು | ಬಿಡದೆ ಸೀಳಿದಾ

ಸೂರ್ಯ ಸುತಗೆ ಪಟ್ಟಗಟ್ಟಿ | ಪರಮನೆನೆಸಿದಾ

ಧೈರ್ಯ ಮುದ್ರಿಕೆ ಕಳುಹಿ ತನ್ನ|ವಾರ್ತೆ ತಿಳಿಸಿದಾ||೨||


ಶರಧಿ ಗಿರಧಿ ಸೇತುವೆಯ | ಭರದಿ ಕಟ್ಟಿದಾ |

ದುರುಳ ರಾವಣನ್ನ ಕೊಂದು|ಧರೆಯ ಸಲಹಿದಾ |

ತರುಣಿಯೊಡನೆ ಕೂಡಿ ತನ್ನ | ಪುರಕೆ ತೆರಳಿದಾ |

ಭರತನನ್ನ ಪೊರೆದ ಬಳಿಕ | ರಾಜ್ಯವಾಳಿದಾ || ೩ ||


ಪರಮ ವೈಭವದಿಂದ ಸಿಂಹ | ಪೀಠವೇರುತಾ |

ಶರಣ ಜನರ ಬಿಡದೆ ಕಾಯ್ದ | ಪರಮಪುರುಷನಾ |

ವಿಫುಲನಾಮವನ್ನು ಬಿಡದೆ | ಜಪಿಸೊ ಮಾನವಾ |

ವಿಫುಲನಾಮವನ್ನು ಬಿಡದೆ|ಜಪಿಸೊ ಮಾನವ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು