|| ಗಣಪತಿ ಸ್ತುತಿ ||
ರಚನೆ : ಶ್ರೀ ವಿಜಯದಾಸರು
ರಾಗ : ಹಂಸಧ್ವನಿ
ಶರಣು ಗಜಮುಖ ಆಖುವಾಹನ
ಶರಣು ಸುರಗಣ ಸೇವಿತ
ಶರಣು ಸಕಲಾಭೀಷ್ಟದಾಯಕ
ಶರಣು ವಿಘ್ನ ವಿನಾಯಕ || ೧ ||
ಹೇಮಖಚಿತ ಕಿರೀಟ ಕುಂಡಲ
ಕಾಮಿತಾರ್ಥ ಪ್ರದಾಯಕ
ಅಮಿತ ಸೌಲಭ್ಯ ಪ್ರಬಲ
ಶಾಸ್ತೋದ್ದಾಮ ವಿದ್ಯಾಶರನಿಧೇ || ೨|
ಪಾಶ ಮೋದಕ ಪರಶುಧರ
ಫಣಿಭೂಷ ಪಾರ್ವತಿ ನಂದನ
ವಾಸವಾರ್ಚಿತ ವಿಜಯವಿಠಲನ
ದಾಸ ಭೋ ಗಣನಾಯಕ || ೩ ||
0 ಕಾಮೆಂಟ್‌ಗಳು