ಕನಕದಾಸರ ಕೃತಿ - ಯಾದವರಾಯ ಬೃಂದಾವನದೊಳು, Yadava Rayaru Brundavanadolu

 || ಕನಕದಾಸರ ಕೃತಿ ||





ಯಾದವರಾಯ ಬೃಂದಾವನದೊಳು

ವೇಣು ನಾದವ ಮಾಡುತಿರೆ ||ಪ||


ರಾಧಾ ಮುಂತಾದ ಗೋಪಿಯರೆಲ್ಲ

ಮಧುಸೂದನ ನಿನ್ನನು ಸೇವಿಸುತಿರೆ

ಸುರರು ಅಂಬರದಿ ಸಂದಣಿಸಿರೆ

ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅ.ಪ||


ಕರದಲಿ ಕೊಳಲನು ಊದುತ ಪಾಡುತ

ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ

ಹರಿ ಹರ ಬ್ರಹ್ಮರು ನಲಿದಾಡುತಿರೆ

ತುಂಬುರು ನಾರದರು ಪಾಡುತಿರೆ||1||


ಅರವಿಂದ ದಳ ನಯನ

ಕರುಗಳ ಸಹಿತಲೇ ಗೋಕುಲವೆಲ್ಲ

ಸಿರಿ ಕಾಗಿನೆಲೆಯಾದಿ ಕೇಶವ ರಾಯ

ತರುಗಳ ಸಹಿತಲೇ ವರಗೋಪಾಲ||2||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು