|| ಭಜನೆ ||
ಹುಚ್ಚು ಹಿಡಿಯಲಿ ಎನಗೆ ಹುಚ್ಚು ಹಿಡಿಯಲಿ
ಅಚ್ಚುತನ ಜಪಿಸುವಂತ ಹುಚ್ಚು ಹಿಡಿಯಲಿ
ರಾಮನಾಮ ಜಪಿಸುವಂತ ಹುಚ್ಚು ಹಿಡಿಯಲಿ||ಪ||
ಕೊಚ್ಚಿಹೋಗಲಿ ಈಗ ಕೊಚ್ಚಿಹೋಗಲಿ
ಕಾಮಕ್ರೋಧ ಕಾಲಕೂಟ ಕೊಚ್ಚಿಹೋಗಲಿ
ಇಚ್ಛೆಯಾಗಲಿ ತುಂಬಾ ಇಚ್ಛೆಯಾಗಲಿ
ರಾಮನಾಮ ಜಪಿಸುವಂಥ ಇಚ್ಛೆಯಾಗಲಿ||೧||
ತುಚ್ಛವಾಗಲಿ ಹೌದು ತುಚ್ಛವಾಗಲಿ
ಅನ್ನಪಾನ ರಾಗಭೋಗ ತುಚ್ಛವಾಗಲಿ
ಪೆಚ್ಚು ಆಗಲಿ ನಮಗೆ ಹೆಚ್ಚು ಆಗಲಿ
ಸೀತಾರಾಮ ಭಜನೆ ಬಿಟ್ಟು ಹೆಚ್ಚು ಆಗಲಿ||೨||
ನುಚ್ಚಾಗಲಿ ನುಚ್ಚು ನೂರಾಗಲಿ
ನಾನು ನನ್ನದೆಂಬ ಅಹಂ ಕೊಚ್ಚಿಹೋಗಲಿ
ಸ್ವಚ್ಛವಾಗಲಿ ಬಲು ಸ್ವಚ್ಛವಾಗಲಿ
ದತ್ತ ಸೇವೆಯಿಂದ ಮನವು ಸ್ವಚ್ಛವಾಗಲಿ||೩||
0 ಕಾಮೆಂಟ್‌ಗಳು