ಅಂಬಿಕಾತನಯ ಭೂತಾಂಬರಾಧಿಪ - Ambika Tanaya Bhutambaradhipa

|| ಗಣಪತಿ ಸ್ತುತಿ ||

ರಚನೆ: ಶ್ರೀ ಜಗನ್ನಾಥ ದಾಸರು [1728-1809]

ರಾಗ: ಶುದ್ಧಧನ್ಯಾಸಿ

ತಾಳ: ಮಿಶ್ರಛಾಪು





ಅಂಬಿಕಾತನಯ ಭೂತಾಂಬರಾಧಿಪ

ಸುರಕದಂಬಸಂಪೂಜ್ಯ ನಿರವದ್ಯ |

ನಿರವದ್ಯ ನಿನ್ನ ಪಾದಾಂಬುಜಗಳೆಮ್ಮ ಸಲಹಲಿ||೧||



ಗಜವಕ್ತ್ರ ಷಣ್ಮುಖಾನುಜ ಶಬ್ದಗುಣ ಗ್ರಾಹಕ

ಭುಜಗಕಟಿಸೂತ್ರ ಸುಚರಿತ್ರ -

ಸುಚರಿತ್ರ ತ್ವತ್ಪದಾಂಭುಜಗಳಿಗೆ ಎರಗಿ ಬಿನ್ನೈಪೆ||೨||



ವಿತ್ತಪತಿ ಮಿತ್ರಸುತ ಭ್ಭತ್ಯಾನುಭ್ರೃತ್ಯನ

ವಿಪತ್ತು ಬಿಡಿಸುವ ಅಜ್ಞಾನ - 

ಅಜ್ಞಾನ ಬಿಡಿಸಿ ಮಮ ಚಿತ್ತಮಂದಿರದಿ ನೆಲೆಗೊಳ್ಳೋ||೩||


ಕಕುಭೇಶ ನಿನ್ನ ಸೇವಕನ ಬಿನ್ನಪವ

ಚಿತ್ತಕೆ ತಂದು ಹರಿಯ ನೆನೆವಂತೆ -

ನೆನೆವಂತೆ ಕರುಣಿಸೋ ಅಕುಟಿಲಾತ್ಮಕನೆ ಅನುಗಾಲ||೪||


ಮಾತಂಗವರದ (ಸನ್ನುತ) ಜಗನ್ನಾಥವಿಠಲನ

ಪ್ರೀತಿಂದ ಭಜಿಸಿ ಸಾರೂಪ್ಯ |

ಸಾರೂಪ್ಯದಿರಿ ಖ್ಯಾತಿಯುತನಾದೆ ಜಗದೊಳು||೫||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು