ಆಂಜನೇಯನೆ ಅಮರ ವಂದಿತ - Anjaneyane Amara Vandiatha

 || ಹನುಮ ಸ್ತುತಿ ||


ಆಂಜನೇಯನೆ ಅಮರ ವಂದಿತ

ಕಂಜನಾಭನ ದೂತನೆ ||ಪ||

ಮಂಜಿನೋಲಗದಂತೆ ಶರಧಿಯ

ದಾಟಿದ ಮಹಾ ಧೀರನೆ ||ಅ.ಪ|| 



ಆಂಜನೇಯನೆ ನಿನ್ನ ಗುಣಗಳ

ಪೊಗಳಲಳವೆ ಪ್ರಖ್ಯಾತನೆ

ಸಂಜೀವನವ ತಂದು ಕಪಿಗಳ

ನಂಜು ಕಳೆದ ಪ್ರಖ್ಯಾತನೆ ||೧||



ಕಾಮನಿಗ್ರಹನೆನಿಸಿ ಸುರರಭಿಮಾನಿ

ದೇವತೆ ಎನಿಸಿದೆ

ರಾಮಪಾದಕ್ಕೆರಗಿ ನಡೆದು

ನಿಸ್ಸೀಮ ನೀನೆಂದೆನಿಸಿದೆ ||೨||             



ಸಿಂಧು ಹಾರಿದೆ ಶ್ರೀಘ್ರದಿಂದಲಿ

ಬಂದು ಸೀತೆಗೆ ನಮಿಸಿದೆ

ತಂದು ಮುದ್ರೆಯನಿತ್ತು ಮಾತೆಯ

ಮನವ ಸಂತೋಷ ಪಡಿಸಿದೆ ||೩||



ಜನಕ ತನುಜೆಯ ಮನವ ಹರುಷಿಸಿ

ವನವ ತಿದ್ತೀಡಾಡಿದೆ

ದನುಜರನ್ನು ಸದೆದು ಲಂಕೆಯ

ಅನಲಾಗುಹುತಿ ಮಾಡಿದೆ ||೪||



ರಾಮಕಾರ್ಯವ ವಹಿಸಿ

ಅಕ್ಷಕುಮಾರನನು ಸಂಹರಿಸಿದೆ

ಘೋರ ರಕ್ಕಸರೆಂಬುವರನು

ಮಾರಿವಶವನು ಗೈಸಿದೆ ||೫||



ಭರದಿ ಬಂದು ರಾಮಪಾದಕ್ಕೆರಗಿ

ಬಿನ್ನಹ ಮಾಡಿದೆ

ಉರಗಗಿರಿ ಹಯವದನನ

ಪರಮ ಭಕ್ತನೆಂದೆನಿಸಿದೆ ||೬||    

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)