|| ಗುರು ಸ್ತುತಿ ||
ಗಳಿಸಿದ್ದ ಯಾರೇನೂ ಒಯ್ಯೋಲ್ಲ ಮನವೇ
ಸಾವಿಗೆ ಮದ್ದೇ ತಿಳಿದಿಲ್ಲ
ಗುರುವಿನ ಪಾದವ ನಂಬಲು ಮನವೇ
ಚಿಂತೆ ಎಂಬುದೇ ಸುಳಿಯೋಲ್ಲ ||ಪ||
ಮನದಲ್ಲಿ ಶಾಂತಿಯ ಮಂತ್ರವ ಜಪಿಸಿ
ಗುರುಪಾದದಲ್ಲಿ ಚಿತ್ತವ ಇರಿಸಿ
ಮದ ಮೋಹವನ್ನು ಮನದಿಂದ ಅಳಿಸಿ
ಗುರು ವಾಕ್ಯವನ್ನು ಮೀರದೆ ನಡೆಸಿ ||೧||
ಪಾಪ ಪುಣ್ಯಗಳ ಅಕ್ಕಿಯ ಅರೆಯೋ
ಜ್ಞಾನದ ಗಂಗೆಲಿ ಹಿಟ್ಟನ್ನು ಸುರಿಯೋ,
ಕೆಟ್ಟ ಕಾಮನೆಯ ಹೆಂಚಾಗಿ ಹಿಡಿಯೋ
ಮುಕ್ತಿಯ ರೊಟ್ಟಿಯ ರುಚಿಯನ್ನು ಸವಿಯೋ||೨||
ಭಕ್ತರ ಕಾಯಲು ಅವಧೂತ ಬಂದ
ಶಿಷ್ಯರ ಉದ್ಧರಿಸೆ ಧರೆಯಲ್ಲಿ ನಿಂದ
ಆತ್ಮನ ಹರಿಯುವ ಚೈತನ್ಯ ತಂದ
ಭಕ್ತರ ಹೃದಯದಿ ನಗುತಲಿ ನಿಂತ ||೩||
0 ಕಾಮೆಂಟ್‌ಗಳು