ಶಾರದಾಂಬೆ ನಿನ್ನ ನಂಬಿದೆನೆ - Sharadambe Ninna nambidene

|| ಶಾರದಾ ಸ್ತುತಿ ||

ರಾಗ : ಕೇದಾರ




ಶಾರದಾಂಬೆ ನಿನ್ನ ನಂಬಿದೆನೆ

ಓ ಸಾರಸಾಕ್ಷಿಯೆ ||ಪ||


ವಾಣಿ ಪುಸ್ತಕ ಪಾಣಿ ಬ್ರಹ್ಮನ ರಾಣಿ

ಪನ್ನಗವೇಣಿ ಶಾರದೆ |

ವೀಣಾಂಕ ವಂದ್ಯಳೆ ಮಾನಿನಿ ಮಣಿ ನೀ||೧||


ನಾರಿ ಮಣಿಯರು ಸೇರಿ ನಿನ್ನನು

ಸಾರಿಕರೆವರು ವಾರಿಜಾಕ್ಷಿಯೆ |

ನೀನಾದ ಪೀಠಕ್ಕೆ ತಾರುಣಿ

ಶಶಿಮುಖಿ ಶಾರದಾಂಬೆ ||೨||


ಸೃಷ್ಠಿಗಧಿಕ ಶೃಂಗೇರಿ ಪುರದೊಳು

ಸೃಷ್ಟಿಕರ್ತನ ಪಟ್ಟದರಸಿಯೆ |

ಭಕ್ತ ಜನರಿಗೆ ಮುಕ್ತಿ ಈವಳೆ

ಹಸ್ತದಿ ಪುಸ್ತಕ ಸೃಷ್ಠಿ ನೀ ಪಿಡಿದಿಹೆ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು