ಘನಶ್ಯಾಮ ಸುಂದರ ಚಿರ ಪ್ರೇಮ ಸಾಗರ - Ghanashyama Sundara Chitra Prema Sagara

|| ಗೋವಿಂದ ಸ್ತುತಿ ||




ಘನಶ್ಯಾಮ ಸುಂದರ

ಚಿರ ಪ್ರೇಮ ಸಾಗರ

ಜಯ ಗೋವಿಂದ ಸುಗುಣಾಕರ

ಮಹದಾನಂದ ಚಿನ್ಮಂದಿರಾ |


ಶೌರಿ ಗಿರಿಧಾರಿ ಮಹಾಮಹಿಮ

ಭಕುತ ವಿಚಾರಿ ದಯಾಭರಿತ

ಜಯ ಸನ್ನುತ ಮಹದುನ್ನತಾ ಭಾಸ್ಕರ ಶ್ರೀಕರ||೧||


ಯೋಗಿ ಜನಪಾಲ ಸದಾ ವಿನುತಾ

ಕರುಣ ವಿಶಾಲ ಸುಧಾಚರಿತ

ನಿನ್ನ ಕಾಣುವ ನಿನ್ನ ಸೇರುವ

ಮನ ನೀಡು ಮಾಧವ ||೨||


ಕೃಷ್ಣಾನಂದ ಮುಕುಂದ ಮುರಾರಿ

ಪಾವನ ಮಾಧವ ಗೋವಿಂದ

ಶ್ರೀಧರ ಕೇಶವ ರಾಘವ ವಿಷ್ಣೋ 

ಲಕ್ಷಿ ನಾಯಕ ನರಸಿಂಹ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು