|| ಹನುಮ ಸ್ತುತಿ ||
kannadabhajanlyrics.blogspot.com, belaguru Swamiji images |
ಹನುಮನೆ ತಂದೆಯು ಹನುಮನೆ ತಾಯಿಯು
ಹನುಮನೆ ಸಕಲವು ಜಗಕೆಲ್ಲ
ಭದ್ರಾ ತೀರದ ಹನುಮನ ಭಜಿಸಿರೆ
ಭವ ಬಂಧನಗಳ ಭಯವಿಲ್ಲ ||ಪ||
ವರಗುರು ವಾಲ್ಮೀಕಿ ರಚಿಸಿದಂತೆ
ರಾಮಾಯಣದ ಪುಣ್ಯ ಕಥೆ
ಕೇಳಿರೆ ಕಿವಿಗಳು ಪಾಡಿರೆ ನಾಲಿಗೆ
ಪಡೆವುದು ಜೀವನ ಸಾರ್ಥಕತೆ ||೧||
ಸುಗ್ರೀವನ ಸಖ ವಾನರ ನಾಯಕ
ಲೋಕೋದ್ಧಾರಕ ಹನುಮಂತ
ನಿನ್ನನು ಎದುರಿಸಿ ಉಳಿದವರಾರೋ
ಭದ್ರಾ ತೀರದ ಹೇ ಹನುಮಂತ ||೨||
ಕಪಟ ವೇಷದಿ ದಶಮುಖ ಬಂದು
ಸೀತಾಪಹರಣ ಮಾಡಿದನು
ಸೀತೆಯ ಹುಡುಕುವ ಸಾಹಸ ಕಾರ್ಯಕೆ
ನಿನ್ನನು ಕಳುಹಿದ ರಾಘವನು ||೩||
ಸಾಗರ ಹಾರಿ ಲಂಕೆಯ ಸೇರಿ
ಅಸುರರ ಕೊಂದ ಯಮಾವತಾರಿ
ಮಾತೆಯ ಕಂಡು ಸಂತಸಗೊಂಡು
ರಾಮರ ಮುದ್ರಿಕೆ ನೀಡಿದ ಶೌರಿ ||೪||
ಭೀಕರ ಶರಧಿಗೆ ಸೇತುವೆ ಕಟ್ಟಿ
ಅಸುರರ ಕರೆದನು ಕೈ ತಟ್ಟಿ
ದುರಳ ಲಂಕೇಶನ ಯಮಪುರಿಗಟ್ಟಿ
ಮೆರೆಯುತ ನಿಂತನು ರಾಮನ ಜಟ್ಟಿ ||೫||
ಹೂಮಳೆಗರೆಯಿತು ದೇವಲೋಕವು
ಹಾಡಿ ನಲಿಯಿತು ಘನ ಕೋಟಿ
ತುಂಬಿತು ಲೋಕದ ಚಿರ ಸುಖ ಶಾಂತಿ
ಏನಿದೆ ರಾಮರ ಮಹಿಮೆಗೆ ಸಾಟಿ ||೬||
ರಘುಕುಲೇಶನ ಪಟ್ಟ ಸ್ವೀಕರಿಸಲು
ಕರೆದನು ಹನುಮನ ಪ್ರೀತಿಯಲಿ
ವಚನವ ನೀಡಿ ನೆಲೆಸುವೆನೆಂದು
ಸದಾ ಹನುಮನ ಹೃದಯದಲಿ ||೭||
ಜಯ ಹನುಮಂತ ಸುಗುಣಾವಂತ
ಸದ್ಗುಣವಂತ ಘನಶೀಲವಂತ
ಸ್ಫೂರ್ತಿಯ ನೀಡೋ ಮಾರ್ಗವ ತೋರೊ
ಪೊರೆದು ಕಾಪಾಡೊ ಹೇ ಹನುಮಂತ ||೮||
0 ಕಾಮೆಂಟ್‌ಗಳು