ಜೈ ಜಗದಂಬೆ ನಮೋ ನಮೋ - Jai Jagdambe Namo Namo

|| ಜಗದಂಬಾ ಸ್ತುತಿ ||







ಜೈ ಜಗದಂಬೆ ನಮೋ ನಮೋ ಶಾಂಭವಿ

ಶಂಕರಿಗೆ ನಮೋ ನಮೋ

ಜೈ ಜಗದಂಬೆ ಅಂಬಾಬಾಯಿ

ಮಜಲಾಠಾವ ದ್ಯಾವಾಪಾಹಿ


ಮಧುಕೈಟಭರನು ಮರ್ದನ ಮಾಡಿದ

ದುರ್ಗಾ ದೇವಿಗೆ  ನಮೋನಮೋ

ಮಹಿಷಾಸುರನನು ದಂಡಿಸಿದ

ಮಹಿಷ ಮರ್ದಿನಿಗೆ ನಮೋ ನಮೋ 


ಚಂಡಮುಂಡರನು ಚಂಡಾಡಿದ

ಚಾಮುಂಡಿಗೆ  ನಮೋ ನಮೋ

ರಕ್ತಬೀಜನ ರಕ್ತಹೀರಿದ

ಶಕ್ತಿ ದೇವಿಗೆ ನಮೋ ನಮೋ


ಶುಂಭನಿಶುಂಭರ ಸಂಹಾರ ಮಾಡಿದ

ಶಂಕರಿ ಮಾತೆಗೆ  ನಮೋನಮೋ

ಜಗತಾಪ ಹಾರಿಣಿ ಜಗದೋದ್ಧಾರಿಣಿ 

ಜಗದಂಬೆಗೆ ನಮೋನಮೋ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು