|| ಶ್ರೀರಾಮರಿಗೆ ಆರತಿ ಹಾಡು ||
ಶ್ರೀರಾಮಗೂ ಸೀತಾದೇವಿಗೂ
ನಾರಿಯರಾರತಿ ಮಾಡಿರೇ ||ಪ||
ಆದಿಯಲ್ಲಸುರರ ಬಾಧೆಯನು
ತಾಳಲಾರದೇ ಮೇದಿನಿಗೇ
ಹೋಗಿ ಮೊರೆಯಿಡಲು
ಮೇದಿನಿಯೊಳು ತಾ ರಾಮನಾಗುವೆನೆಂದ ||೧||
ವಸಂತ ಋತುಕಾಲದೀ
ಕುಶಲಾದಿಂ ಚೈತ್ರಮಾಸದಿ
ಎಸೆಯುತಲಿಹ ಶುದ್ಧ ನವಮಿಯಲೀ
ಅಸುರ ಸಂಹರಿಸಲು ವಸುಧೆಯೊಳುದಿಸಿದ||೨||
ಶೋಡಷ ವರುಷದ ಬಾಲನೂ
ನೋಡದೆ ತಾಟಕಿಯನು ಮರ್ದಿಸಿ
ಮಾಡಿದ ಮುನಿಕೃತ್ಯವ ನಡೆಸಿ
ವನಜ ಮುಖಿಸೀತೆಗೆ ಮಾಲೆಯನ್ಹಾಕಿದ||೩||
0 ಕಾಮೆಂಟ್‌ಗಳು