ಜಯ ಜಯ ಮಂಗಳ ಮೂರ್ತೆ - Jaya Jaya Mangala Murthe

|| ಗಣಪತಿ ಸ್ತುತಿ ||




ಜಯ ಜಯ ಮಂಗಳ ಮೂರ್ತೆ

ಚಿತ್ಸುಖದಾ ಪರಿಪೂರ್ತೆ

ಜಯ ಜಯ ಸಿದ್ಧಿಯ  ಮೂರ್ತೆ

ಆರತಿ ಗಣಪತಿ ||ಪ||


ಭಾದ್ರಪದಾ ಚೌತಿಯಲಿ

ಮೃಣ್ಮಮದಾ ರೂಪದಲಿ

ಸಿದ್ಧಿವಿನಾಯಕ ದೇವ

ಜನಿಸಿದಿ ಗಣನಾಥ ||೧||


ದೇವ ಗಣೇಶಾ ಗಣೇಶಾ

ಗೀರ್ವಾಣ ನತದೀಶಾ

ಶಿವಸುತ ಮೋದಕ ಪ್ರಿಯಾ

ಸರ್ವಗುಣಾಧೀಶಾ ||೨||


ಶಂಭುವಿನಾ ವರ ಕುವರ

ನಂಬಿಹೆನೈ ವಿಘ್ನ ಹರ

ಅಂಬುಜ ನಯನನೆ ಶ್ರೀ ಗುರು

ವಿಠ್ಠಲ ಬೆಳಗುವೆನಾರುತಿಯಾ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು