ಎಂದು ಕಾಂಬೆನು ಎನ್ನ ಸಲಹುವ - Endu kambenu Enna Salahuva

|| ಕೃಷ್ಣ ಭಜನೆ ||

 ರಚನೆ : ಶ್ರೀ ಪ್ರಸನ್ನ ವೆಂಕಟದಾಸರು 




ಎಂದು ಕಾಂಬೆನು ಎನ್ನ ಸಲಹುವ

ತಂದೆ ಉಡುಪಿಯ ಜಾಣನ

ಮಂದಹಾಸ ಪ್ರವೀಣನ

ಇಂದಿರಾ ಭೂ ರಮಣನ ||ಪ||


 

ದೇವಕಿಯ ಜಠರದಲಿ ಬಂದನ

ಆವ ಪಳ್ಳಿಲಿ ನಿಂದನಾ|

ಮಾವ ಕಂಸನ ಕೊಂದನಾ

ಕಾವನಯ್ಯ ಮುಕುಂದನಾ||೧||


ಕಡಲ ದಡದೊಳು ಎಸೆವ ರಂಗನ 

ಕಡಗೋಲ್ ನೇಣನು ಪಿಡಿದನಾ

ಮೃಡ ಪುರಂದರನೊಡೆಯನ

ಈರಡಿ ಗಳಲಿ ಶಿರವನಿಡುವೆನಾ ||೨||



ಪೂರ್ಣಪ್ರಜ್ಞರಿಗೊಲಿದು ದ್ವೊರಕೆ

ಮಣ್ಣಿನೊಳಪ್ರಕಟಿಸಿದನಾ|

ಭವಾಣಕೆಪ್ಲವನಾದನಾ ಪ್ರ

ಸನ್ನವೆಂಕಟ ಕೃಷ್ಣನಾ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು