ಮಾರ್ಗವ ಮಾರುತಿರಾಯ - Margava Thoro Maruthi Raya

|| ಮಾರುತಿ ಭಜನೆ ||


kannadabhajanlyrics.blogspot.com
kannadabhajanlyrics.blogspot.com, belaguru Swamiji images 



ಮಾರ್ಗವ ತೋರೋ ಮಾರುತಿರಾಯ

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ ||ಪ||


 ನಿತ್ಯದಿ ನಿನ್ನ ಪೂಜಿಪೆ ನಾನು |

ಭಕ್ತಿಯ ಮನಕೆ ನೀಡುತ ನೀನು ||

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೧||


ಒಳಗಡೆ ರಾಮರ ಇರಿಸಿದೆ ನೀನು

ಹೊರಗಡೆ ರಾಮರ ಭಜಿಸುವೆ ನಾನು

ಹೊರಗು ಒಳಗು ಎಲ್ಲೆಡೆ ಬೆಳಗುವ

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೨||


 ದಾಸ್ಯ ತನದಲಿ ರಾಮರ ಮೆಚ್ಚಿಸಿ

 ಹಾಸ್ಯವ ಮಾಡಿದೆ ರಾವಣನಳಿಸಿ

 ಈಶನ ಪದವಿಯ ಸುಲಭದಿ ಕೊಡುವ 

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೩||


 

 ಧೀರತನದಲಿ ದುರುಳರ ಹೊಡೆದು

 ಶೂರತನದಲಿ ಗುಡ್ಡವನೆತ್ತಿ

 ವೀರ ಹನುಮನೆ ಕರುಣಿಸು ನೀನು

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೪||


ಕನಸಲಿ ಬಂದು ದರುಶನ ಕೊಟ್ಟು

 ಮನಸಿಗೆ ಹೇಳಿದ ರಾಮರ ಮಂತ್ರವ

 ದಿನದಿನ ಪಠಿಸುವ ಇನಕುಲ ತಿಲಕನೆ 

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೫||


 ಹನುಮನು ನುಡಿಸಿದ ನುಡಿಯನು ಹೇಳಿ

 ಘನತರ ಪಾಪವ ಕ್ಷಣದಲಿ ನೀಗಿ

 ದಿನಕರ ಕೋಟಿ ತೇಜದಿ ಹೊಳೆಯುವ

ರಾಮರ ಪಾದಕ್ಕೆ ಸೀತಾರಾಮರ ಪಾದಕ್ಕೆ||೬||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು