|| ಗೋವಿಂದ ಸ್ತುತಿ ||
ಪರಮ ಪುರುಷ ಹರಿ ಗೋವಿಂದ -
ಸಿರಿವರ ನಾರಾಯಣ - ಗೋವಿಂದ
ನಿಶೆವೆನರಸುರನ ಉಸಿರ ತೊಲಗಿಸಿದೆಕುಸುಮ
ಶರನ ಪಿತ ಗೋವಿಂದವಸು ಪೂರಿತ
ಶ್ರುತಿ ಮಸುಳಿಸದೆ ತಂದೆ ಬಿಸಜ
ಸಂಭವನಯ್ಯ ಗೋವಿಂದ ||1||
ಜತನದಿ ಮಧುಮಥನದಿ ಮಂದರ ಪರುವತ
ಉದ್ಧರಿಸಿದೆ ಗೋವಿಂದಶತ ಕ್ರತುವಿನ ಸಿರಿ
ಗತವಾಗದ ಮುನ್ನ ಕ್ಷಿತಿ ಪೆತ್ತನಯ್ಯ ಗೋವಿಂದ ||2||
ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ
ಗೋವಿಂದ ಆತನೊಡನೆ ಕಾದಾತನ ಗೆಲಿದು
ಮಹೀತಳವನು ತಂದೆ ಗೋವಿಂದ ||3||
ದುರುಳಾಸುರನ ನಡುಗರುಳ ಮಾಲೆ ಮುಂ-
ಗೊರಳೊಳು ಧರಿಸಿದೆ ಗೋವಿಂದ ಗರಳ
ಕೊರಳನು ಬೆರಳೆತ್ತಿ ಪೊಗಳಲು
ತರಳಗೊಲಿದೆ ನೀ ಗೋವಿಂದ||4||
ವಾಮನನಾಗಿ ನಿಸ್ಸೀಮ ಬಲಿಯ ಕೈಯ
ಭೂಮಿಯನಳೆಕೊಂಡೆ ಗೋವಿಂದ
ತಾಮರಸ ಪದದಿ ಕನಕ ಗರ್ಭಯೋಗ ವ್ಯೋಮ
ಗಂಗೆಯ ತಂದೆ ಗೋವಿಂದ ||5||
ಸುರ ಪಶುವಿಗೆ ಋಷಿಯನು ಕೊಂದನ
ಬಹುಕರ ಬಲ ಮುರಿದೆಯೋ ಗೋವಿಂದ
ತರ ಹರಿಸದೆ ವಸುಧೆಯ ಒಡೆತನ
ಭೂಸುರರಿಗೆ ನೀಡಿದೆ ಗೋವಿಂದ ||6||
ತ್ರಿಣಯನ ತಾತ್ಪರ್ಯ ರಾವಣನ
ಶಿರರಣದೊಳುರುಳಿಸಿದೆ ಗೋವಿಂದ
ಕ್ಷಣಮೆಣಿಸದೆ ಸದ್ಗುಣವಂತ ವಿಭೀ-
ಷಣಗಭಯವಿತ್ತೆ ಗೋವಿಂದ ||7||
ಮಾರಣ ಕ್ರತು ಸಂಪೂರಣ ಕಂಸ ಸಂ-
ಹಾರಣ ಭುಜಬಲ ಗೋವಿಂದ
ವಾರಣಪುರಪತಿ ಸಿರಿ ಭೂ ಭಾರೋತ್ತಾರಣ
ಬಲಯುತ ಗೋವಿಂದ ||8||
ಕಥೆಯನು ನಿರ್ಮಿಸಿ ಪತಿವ್ರತೆಯರ ಘನ
ವ್ರತಗಳ ಕೆಡಿಸಿದೆ ಗೋವಿಂದ
ಜತೆಯಗಲದ ಪುರ ತ್ರಿತಯ ಗೆಲಿದು
ದೇವತೆಗಳ ಸಲಹಿದೆ ಗೋವಿಂದ ||9||
ಜಾಜಿಯ ಮರಕತ ತೇಜಿಯನೇರಿ ವಿ-
ರಾಜಿಪ ರಾವುತ ಗೋವಿಂದ
ಸೂಜಿಯ ಬೆನ್ನೊಳು ರಾಜಿಪ ತೆರದಿ
ಸಹಜರೊಳಡಗಿರ್ಪ ಗೋವಿಂದ ||10||
ಮೇದಿನಿಗೋಸುಗ ಕಾದಿ ಕಲಹದಿ
ವಿರೋಧಿಗಳ ಕೊಂದೆಗೋವಿಂದ
ಸಾಧುಗಳಿಗೆ ಸುಖವೀಯುವ ಬಾಡದ
ಶ್ರೀಧರ ಕೇಶವ ಗೋವಿಂದ ||11||
0 ಕಾಮೆಂಟ್‌ಗಳು