ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ - Padumanabhane Ninna Pada Kinkarananna

|| ಗೋವಿಂದ ಸ್ತುತಿ ||

 ರಚನೆ : ಹೆಳವನಕಟ್ಟೆ ಗಿರಿಯಮ್ಮ 





ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ

ಕೈ ಬಿಡುವುದುಚಿತವೇ ರಂಗ ||ಪ||


ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-

ತದಿ ನೀ ಕಾಯೊ ಎನ್ನೊಡೆಯ ರಂಗ ||ಅ.ಪ||


ಅಜಗರಶಯನನೆ ಬುಧಜನ ನಮಿತನೆ

ತ್ರಿಜಗವಂದಿತಪಾದ ಪದುಮಜ ಜನಕನೆ ||೧||


ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ

ಶಶಿಭೂಷಣಸಖ ಶಿಶುವ ಕಾಪಾಡೊ ||೨||


ಸಾಂದೀಪಗೊಲಿದೆ ಸಂದೇಹವಿಲ್ಲ

ತಂದೆ ಹೆಳವನಕಟ್ಟೆ ರಂಗ ಕೃಪಾಂಗ ||೩||


ಹಾಡನ್ನು ಹಾಡಲು ಈ ಕೆಳಗಿನ ಲಿಂಕ್ ಒತ್ತಿ 👇https://www.facebook.com/groups/1993083294309926/permalink/3137220626562848/


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು