ರಕ್ಷಿಸೆ ಬಿಡದೆ ಸರ್ವೇಶ್ವರೀ - Rakshise Bidade Sarveshwari

ದೇವಿ ಸ್ತುತಿ 

ರಾಗ : ಆನಂದ ಭೈರವಿ




ರಕ್ಷಿಸೆ ಬಿಡದೆ | ಸರ್ವೇಶ್ವರೀ | ರಕ್ಷಿಸೆ ಬಿಡದೆ |

ರಕ್ಷಿಸೆ ಬಿಡದೆ ಉ|ಪೇಕ್ಷೆಯ ಮಾಡದೆ 

ಈಕ್ಷಿಸೆ ಕರುಣ ಕಟಾಕ್ಷದಿ ವರದೆ |


ಬಂದೇನು ಭವದೀ  ನರ ಜನ್ಮದಿ ನೊಂದೆ ಸಂಕಟದಿ

ಹೊಂದಿದೆ ನಯ ಪಾಪ ಕುಂದೀಸಿ ಜ್ಞಾನದ

ಮಂದಿರವ ತೋರೆ ನಂದಿವಾಹನ ರಾಣಿ ||೧||


ತಾಯೆ ಸಂಪದವಾ  ಇತ್ತೆನ್ನನು ಕಾಯೆ ನಮ್ಮವ್ವಾ 

ಕಾಯಜಾಂಗಿಯೆ ವಿಶ್ವ । ನಾಯಕಿ ಕಮಲದ

ಳಾಯಶಾಂಬಕಿ ಶಿವ|ಜಾಯೆ ಕರುಣದಿಂದ||೨||


ಅರ್ಚಿಸಲರಿಯೇ|ನಿನ್ನನು ನಾನು ಮೆಚ್ಚಿಸಲರಿಯೆ||

ಸಚ್ಚರಿತಳೆ ಭಕ್ತರಿಚ್ಛಿತ ಸಲಿಸುವ|ಸಚ್ಚಿನ್ಮಯಾತ್ಮಕಿ |

ಸ್ವಚ್ಛರಿವಿತ್ತೆಂನ ||೩||


ಸೂಕರಗಲದಾ|ಗ್ರಾಮದಿ ನಿಂದು 

ಚೋರೆಯೋಳ್ಪೊರೆವಾ ||

ಏಕದಂತನ ಮಾತೆ ಲೋಕದೊಳ್ ವಿಖ್ಯಾತೆ|

ನಾಕೇಶಾರ್ಯಾರ್ಚಿತೆ ಶ್ರೀಕಂಠೇಶ್ವರ ಪ್ರೀತೆ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು