ವೆಂಕಟೇಶ ಕಲ್ಯಾಣ ವಿಶ್ವದ ಕಲ್ಯಾಣ - Venkatesha Kalyana Vishwada Kalyana

|| ಶ್ರೀನಿವಾಸ ಕಲ್ಯಾಣ ಹಾಡು ||




ವೆಂಕಟೇಶ ಕಲ್ಯಾಣ ವಿಶ್ವದ ಕಲ್ಯಾಣ

 ಪದ್ಮಾವತಿಯ ಕಲ್ಯಾಣ ಭಾಗ್ಯದ ಕಲ್ಯಾಣ

 ನಿತ್ಯೋತ್ಸವಗಳ ಕಲ್ಯಾಣ ನಿತ್ಯ ಕಲ್ಯಾಣ

 ಪದ್ಮಾವತಿಯ ಕಲ್ಯಾಣ ಭಾಗ್ಯದ ಕಲ್ಯಾಣ||


 ಬ್ರಹ್ಮ ರುದ್ರರು ಇಂದ್ರ ಚಂದ್ರರು

 ಮುಕ್ಕೋಟಿ ಸುರರು ಬಂದಿಹರು

 ಮನ್ಮಥ ಜನಕನ ಮದುವೆಯ ಮಾಡಲು

 ಲಕುಮಿಯು ಬಂದಳು ಬಕುಳೆಯು ಬಂದಿಹಳು||


 ಬನ್ನಿರಿ ವೈಶಾಖ ದಶಮಿಯ ಕಲ್ಯಾಣ

 ನೋಡಿರಿ ವೈಭವಪೂರಿತ ಕಲ್ಯಾಣ

 ಶ್ರೀನಿಧಿ ಕಮಲನಾಭನ ಕಲ್ಯಾಣ

 ಲೋಕದ ಕಣ್ಮನ ಸೆಳೆಯುವ ಕಲ್ಯಾಣ||


 ಕಲ್ಯಾಣೋತ್ಸವ ಸೇವೆಯ ಮಾಡೋಣ

 ಶ್ರೀನಿವಾಸನ ಕಲ್ಯಾಣ ನೋಡೋಣ

 ಕಾಣಿಕೆ ಸಲ್ಲಿಸಿ ನಮಿಸೋಣ

 ಕೈವಲ್ಯ ಸುಖವನು ಪಡೆಯೋಣ|| 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು