ದೇವಿ ಸ್ತುತಿ
ರಾಗ : ಆನಂದ ಭೈರವಿ
ರಕ್ಷಿಸೆ ಬಿಡದೆ | ಸರ್ವೇಶ್ವರೀ | ರಕ್ಷಿಸೆ ಬಿಡದೆ |
ರಕ್ಷಿಸೆ ಬಿಡದೆ ಉ|ಪೇಕ್ಷೆಯ ಮಾಡದೆ
ಈಕ್ಷಿಸೆ ಕರುಣ ಕಟಾಕ್ಷದಿ ವರದೆ |
ಬಂದೇನು ಭವದೀ ನರ ಜನ್ಮದಿ ನೊಂದೆ ಸಂಕಟದಿ
ಹೊಂದಿದೆ ನಯ ಪಾಪ ಕುಂದೀಸಿ ಜ್ಞಾನದ
ಮಂದಿರವ ತೋರೆ ನಂದಿವಾಹನ ರಾಣಿ ||೧||
ತಾಯೆ ಸಂಪದವಾ ಇತ್ತೆನ್ನನು ಕಾಯೆ ನಮ್ಮವ್ವಾ
ಕಾಯಜಾಂಗಿಯೆ ವಿಶ್ವ । ನಾಯಕಿ ಕಮಲದ
ಳಾಯಶಾಂಬಕಿ ಶಿವ|ಜಾಯೆ ಕರುಣದಿಂದ||೨||
ಅರ್ಚಿಸಲರಿಯೇ|ನಿನ್ನನು ನಾನು ಮೆಚ್ಚಿಸಲರಿಯೆ||
ಸಚ್ಚರಿತಳೆ ಭಕ್ತರಿಚ್ಛಿತ ಸಲಿಸುವ|ಸಚ್ಚಿನ್ಮಯಾತ್ಮಕಿ |
ಸ್ವಚ್ಛರಿವಿತ್ತೆಂನ ||೩||
ಸೂಕರಗಲದಾ|ಗ್ರಾಮದಿ ನಿಂದು
ಚೋರೆಯೋಳ್ಪೊರೆವಾ ||
ಏಕದಂತನ ಮಾತೆ ಲೋಕದೊಳ್ ವಿಖ್ಯಾತೆ|
ನಾಕೇಶಾರ್ಯಾರ್ಚಿತೆ ಶ್ರೀಕಂಠೇಶ್ವರ ಪ್ರೀತೆ||೪||
0 ಕಾಮೆಂಟ್ಗಳು