ಶಾರದೆ ದೇವಿಯೇ ಕೈಯನು ಮುಗಿಯುವೆ - Sharade Deviye Kaiyanu Mugiyuve

|| ಶಾರದಾ ಸ್ತುತಿ ||

ರಾಗ : ಶಿವರಂಜನಿ




ಶಾರದೆ ದೇವಿಯೇ ಕೈಯನು ಮುಗಿಯುವೆ

ಕರುಣವ ನೀಡುತ ಸಲಹಮ್ಮ

ಮರೆಯದ ರೀತಿಲಿ ಪಾಠಗಳೆಲ್ಲವ |

ಕಲಿಯಲು ಜ್ಞಾನವ ನೀಡಮ್ಮ ||ಪ||


ಶಾಲೆಯು ಎಂಬುದೆ ನಿನ್ನಯ ಗುಡಿಯು |

ಕಾಲವೆ ನಿನ್ನಯ ಆಭರಣ |

ಬಾಲರ ಭಕ್ತರು ಗುರುವೆ ಅರ್ಚಕ |

ಪಾಠವೆ ನಿನ್ನಯ ಮಂತ್ರಗಳು II೧II


ಮಡಗಿದ ಮನದಲಿ ಓದುತ ಬರೆಯಲು |

ಜಾತಿಯ ನೋಡದೆ ಒಲಿಯುತ್ತ|

ದೃಢದಲಿ ಮೇಲ್ಮೆಯ ಕೋರುವೆ ಮಾತೆಯೆ |

ಬೇಧದ ಭಾವನೆ ಇಡದಂತೆ II೨II


ಶಾರದೆ ಮಾತೆಯೆ ನಿನ್ನಯ ಭಕ್ತಿಗೆ |

ನೀತಿಯ ಮಾತದು ಆಭರಣ |

ತೋರಲು ಹೆಮ್ಮೆಯ ಬಾಯನು ಮುಚ್ಚಿಸಿ |

ತುಳಿಯುವೆ ಬಯಲಿಗೆ ಬರದಂತೆ II೩II


ಶಾರದೆ ಮಾತೆಯ ಒಲಿಸಿದ ಜನರನು

ಸಲಹಲು ಬರುವಳು ಮಹದೇವಿ

ಶಾರದೆ ಮಾತೆಯ ಒಲಿಸದ ಜನರನು |

ತುಳಿಯಲು ಬರುವಳು ಮಹದೇವಿ II೪II



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು