|| ರಾಘವೇಂದ್ರ ಸ್ತುತಿ ||
ರಾಗ : ಕಲ್ಯಾಣಿ
ತಾಳ : ಆದಿತಾಳ
ಬಾರೋ ರಾಘವೇಂದ್ರ ಬಾರೋ
ಕಾರುಣ್ಯವಾರಿಧಿ ಬಾರೋ ||ಪಲ್ಲವಿ||
ಆರಾಧಿಪ ಭಕ್ತರಭೀಷ್ಟ ಪೂರೈಸುವ
ಪ್ರಭುವೆ ಬಾರೋ ||ಅ.ಪ||
ರಾಜವಂಶೋದ್ಭವನ ಪಾದ
ರಾಜೀವಭೃಂಗನೆ ಬಾ ಬಾರೋ
ರಾಜಾಧಿರಾಜರೊಳು ವಿರಾಜಿಸುವ
ಚೆಲುವ ಬಾರೋ||೧||
ವ್ಯಾಸರಾಯನೆನಿಸಿ ನೃಪನ
ಕ್ಷೇಶ ಕಳೆದವನೆ ಬಾರೋ |
ಶ್ರೀ ಸುಧೀಂದ್ರ ಕರಸಂಜಾತ
ವಾಸುದೇವಾರ್ಚಕನೆ ಬಾರೋ ||೨||
ಸನ್ಯಾಸ ಕುಲದೀಪ ಬಾರೋ
ಸನ್ನುತ ಮಹಿಮನೆ ಬಾರೋ |
ಮಾನ್ಯ ಜಗನ್ನಾಥವಿಲನೆ ಪ್ರಸನ್ನ
ಜನರ ಪ್ರಿಯ ಬಾರೋ॥೩॥
0 ಕಾಮೆಂಟ್‌ಗಳು