ಸುಂದರಿ ಮಣಿ ಪೀಠಕೆ ಬಾರೆ - Sundari Mani Peetake Baare

|| ಲಕ್ಷ್ಮಿ ಹಾಡು ||




ಸುಂದರಿ ಮಣಿ ಪೀಠಕೆ ಬಾರೆ

ಸುಂದರಾಂಗನ ರಾಣಿ||ಪ||


ಎತ್ತಲು ನೋಡಲು ಸುತ್ತಲು ಮಲ್ಲಿಗೆ

ಲತೆಗಳು ಶೋಭಿಪವು ಪುತ್ಥಳಿಯಂತೆ ಚಿತ್ರವ

ಬರೆದಿಹ ಮುತ್ತಿನ ಪೀಠಕೆ ಬಾ ಬಾ ||೧||


 ಮಲ್ಲೆಯು ಮಲ್ಲಿಗೆ ಒಳ್ಳೆಯ ಸಂಪಿಗೆ

 ಸಲ್ಲಲಿಸುತ ಶೋಭಿಪವು

 ವಲ್ಲಭ ರಾಜನ ವಲ್ಲಭೆ ನೀನು ಮೆಲ್ಲನೆ

 ಹೆಜ್ಜೆ ಇಡುತ್ತ ಬಾ ಬಾ ||೨||


 ಮಡದಿಯರೆಲ್ಲರು ಸಡಗರದಿಂದಲಿ

 ನಡೆಮುಡಿ ಹಾಸುತಲಿಹರು

 ಒಡೆಯ ಪತಿ ಶ್ರೀ ಉಡುಪಿಯ ಕೃಷ್ಣನ

 ಮಡದಿ ಪೀಠಕೆ ಬಾ ಬಾ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು