ಆಕಾಶ್‌ದಾ ಅಡವ್ಯಾಗ ಧೂಪಾದ ಹೊಗೆಯೆದ್ದು - Akashda Adavyaga Dhoopada

|| ಜಾನಪದ ಶೈಲಿ ಶಿವಭಜನೆ ||



ಆಕಾಶ್‌ದಾ ಅಡವ್ಯಾಗ ಧೂಪಾದ ಹೊಗೆಯೆದ್ದು

ಅಲ್ಲೇ ಮಾದೇವ್‌ಗೆ ಶಿವಪೂಜೆ - ೨ 

ಅಲ್ಲೇ ಮಾದೇವ್‌ಗೆ ಶಿವಪೂಜೆ ಆಗುವಾಗ - ೨

ಆಕಾಶ್‌ದಾ ಗಂಟೆ ಢಣಿರೆಂದೂ... ||೧||


ಅಟ್ಟಕ್ಕೆ ಏಣಿಯಾಸೆ, ಬೆಟ್ಟಕ್ಕೆ ಬಿದಿರಾಸೆ

ಹೆಣ್ಣು ಮಕ್ಕಳಿಗೆ ತವರಾಸೆ - ೨

ಹೆಣ್ಣು ಮಕ್ಕಳಿಗೆ ತವರಾಸೆ ಮಾದೇವ - ೨

ನಿಮ್ಮಾಸೆ ನಮಗೆ ಅನುಗಾಲ ||೨||


ಹೊತ್ತು ಮುಳುಗಿದರೇನೋ ಕತ್ತಲಾದರೇನು

ಅಪ್ಪಾ ನಿನ್ ಬಳಿಗೆ ಬರುವೇವು - ೨

ಅಪ್ಪಾ ನಿನ್ ಬಳಿಗೆ ಬರುವೇವು ಮಾದೇವ - ೨

ಮುತ್ತೀನ ಬಾಗಿಲ ತೆರೆದಿಡು....||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು