||ಗುರು ಸ್ತುತಿ ||
ರಚನೆ : ಶ್ರೀ ಭವತಾರಕರು
ದೇವನಲ್ಲವೇನೋ ಸದ್ಗುರು
ಮಹಾ ದೇವನಲ್ಲವೇನೋ ||ಪ||
ಆದಿಯೊಳು ಸಿದ್ಧರು|ಹೋದ ದಾರಿಯ ತೋರಿ |
ಭೇದವ ಬಿಡಿಸಿದ|ಸಾಧುಮೂರುತಿ ಗುರು||ಅ.ಪ.||
ನರಜನ್ಮದೊಳಗೆ ಬಂದು | ಪ್ರಪಂಚದ |
ಕಡಲಮಧ್ಯದಲಿ ನಿಂದು ಅರಿತು ಮರೆತು ಒಮ್ಮೆ |
ಗುರುವೆಂದು ನೆನೆದರೆ | ಗುರುತಿಟ್ಟು, ಅವರಿಗೆ |
ಪರತತ್ತ್ವ ತೋರಿದ ||೧||
ಆಶಾಪಾಶವ ಬಿಡಿಸಿ | ಮಾಡಿದ ಬಹು |
ದೋಷಕರ್ಮವ ಕೆಡಿಸಿ ನ್ಯಾಸಧ್ಯಾಸದಿ ಜಪ |
ಮಾಡೆಂದು ಬೋಧಿಸಿ | ಪ್ರಕಾಶ ತೋರಿದ |
ಈಶ ಮಹೇಶನು ||೨||
ಭಾವವ ನೋಡದೆ | ನಂಬಿದವರಿಗೆ |
ಮುಕ್ತಿಯಪಾಲಿಸುವ ||
ಕರ್ತೃ ಸದ್ಗುರು ಭವ | ತಾರಕ ದೇವನು ||
ಪ್ರತ್ಯಕ್ಷನಾದಂಥ | ಪರಬ್ರಹ್ಮರೂಪನು ||೩||
0 ಕಾಮೆಂಟ್‌ಗಳು