|| ಶಿವ ಸ್ತುತಿ ||
ಏನಂಥ ಕರೆಯಲಿ ಶಿವನಾ|
ನಾನೇನಂಥ ಕರೆಯಾಲಿ ಹರನಾ
ನನ್ನ ನಾಗಭೂಷಣನ್ಹೊತ್ತು ಮೆರೆವಾ ಶಂಕರನಾ||ಪ||
ನಾನೇ ಒಂದು ಹುತ್ತವಾದೆ ನೀನೇ ಒಂದು ಸರ್ಪವಾದೆ - ೨
ಸರ್ಪವಿಲ್ಲದ ಮ್ಯಾಲೆ ಬರೀ ಹುತ್ತ ನಾನಾದೆ ||೧||
ನಾನೇ ಒಂದು ಗುಡಿಯಾದೆ ನೀನೇ ಒಂದು ಲಿಂಗವಾದೆ -೨
ಲಿಂಗವಿಲ್ಲದ ಮ್ಯಾಲೆ ಬರೀ ಗುಡಿ ನಾನಾದೆ ||೨||
ನಾನೇ ಒಂದು ತೋಟವಾದೆ ನೀನೇ ಒಂದು ಬೇಲಿಯಾದೆ -
ಬೇಲಿಯಿಲ್ಲದ ಮ್ಯಾಲೆ ಬರೀ ತೋಟ ನಾನಾದೆ ||೩||
ನಾನೇ ಒಂದು ವೃಕ್ಷವಾದೆ ನೀನೇ ಒಂದು ಬೀಜವಾದೆ-೨
ಬೀಜವಿಲ್ಲದ ಮ್ಯಾಲೆ ಬರೀ ವೃಕ್ಷ ನಾನಾದೆ ||೪||
ನಾನೇ ಒಂದು ದೇಹವಾದೆ ನೀನೇ ಒಂದು ಆತ್ಮವಾದೆ-೨
ಆತ್ಮವಿಲ್ಲದ ಮ್ಯಾಲೆ ಬರೀ ದೇಹ ನಾನಾದೆ ||೫||
0 ಕಾಮೆಂಟ್‌ಗಳು