|| ರಾಮ ಕೃಷ್ಣರ ಹಾಡು ||
ರಾಗ : ಭೈರವಿ
ತಾಳ : ಏಕ
ಜಯದೇವ ಜಯದೇವ
ಜಯ ಜಯ ಭಗವಂತ|
ಭಯಪರಿಹರಿಸುತ ಭಕುತರ
ಪೊರೆಯೈ ಶ್ರೀಕಾಂತಾ||ಪ||
ದಶರಥ ಕೌಸಲ್ಯಾ ಸುತನಾಗಿ ಜನಿಸಿ |
ಋಷಿ ವಿಶ್ವಾಮಿತ್ರನ ಧ್ವರ ಸಂರಕ್ಷಿಸಿ ||
ತ್ರಿಶದ ದೂಷಣೆ ಖಳರ ಮಣ್ಣು ಮುಕ್ಕಿಸಿ |
ನಿಶಿತ ಶಸ್ತ್ರದಿ ರಾವಣನ ಸಂಹರಿಸಿ
ದೇವಕಿ ವಸುದೇವರ ಮಗನಾಗಿ ಹುಟ್ಟಿ |
ಪಾವನ ಗೈದು ಪನ್ನಗನ ಹೆಡೆಯ ಮೆಟ್ಟಿ |
ಗೋಗಳ ಕಾಯ್ದು ಗೋವರ್ಧನ ಗಿರಿ ಎತ್ತಿ |
ಮಾವ ಕಂಸನ ಕೊಂದ ಪ್ರಖ್ಯಾತ ಮೂರ್ತಿ||೧||
ಚಿತ್ತಜನಯ್ಯನೆ ಚಿನಮಯ ರೂಪಾ |
ದುಷ್ಟ ಮರ್ದನ ಶಿಷ್ಟ ಪಾಲಕನ ಭೂಪಾ || -
ಸೃಷ್ಟಿ ಸ್ಥಿತಿ ಲಯಕರ್ತಾ ನಿತ್ಯ ನೀ ತೃಪ್ತಾ |
ಶ್ರೇಷ್ಠ ಭೂಪತಿ ವಿಠಲನೇ ಪರಮಾತ್ಮಾ||೨||
0 ಕಾಮೆಂಟ್‌ಗಳು