|| ಪಾಂಡುರಂಗ ಸ್ತುತಿ ||
ವಿಠಲ ವಿಠಲ ವಿಠಲ | ವಿಠಲ ಪಂಡರಿ ವಿಠಲ ||
ನೀ ಕರುಣಿಸು ವಿಠಲಾ|ನಮ್ಮ ಸಾಹೋಪಂಡರಿ ವಿಠಲ
ವಿಠಲ ವಿಠಲ ವಿಠಲ|ವಿಠಲ ಪಂಡರಿ ವಿಠಲ||ಪ||
ದೋಷಿಯೊಳಗೆ ಹಿರಿಯನು ನಾನು |
ನಿರ್ದೋಷಿಗಳ ಆಸೆ ವಿಠಲಾ |
ಸಾಸಿವೆಯೆಷ್ಟು ಭಕುತಿಯನರಿಯನು
ಶೇಷಶಯನ ಶ್ರೀ ವಿಠಲಾ ವಿಠಲ ll೧||
ಭವಸಾಗರದಲಿ ಮುಳುಗುವೆ ಸುಮ್ಮನೆ
ಅವಲೋಕಿಸುವರೇ ವಿಠಲಾ |
ನವನವ ವಿಷಯಕೆ ಹಿಗ್ಗುತಲಿಹಾ|
ಮನದವಸರ ಕಾಯೋ ವಿಠಲಾ ವಿಠಲ ||೨||
ಚಾವಕೆ ಮಾಡುವೆ ಸಾವಿರ ತಪ್ಪನು |
ಕಾಯೋ ದಯಾಂಬುದೆ ವಿಠಲಾ
ಶ್ರೀ ವರಪ್ರಸನ್ನ ವೆಂಕಟ ವಿಠಲಾ |
ಜೀವಕೆ ಹೊಣೆ ನೀ ವಿಠಲಾ ||೩||
0 ಕಾಮೆಂಟ್‌ಗಳು