ಜಯತು ಕೋದಂಡ ರಾಮ ಜಯತು ದಶರಥ ರಾಮ - Jayathu kodanda Rama

|| ಶ್ರೀರಾಮ ಸ್ತುತಿ ||




ಜಯತು ಕೋದಂಡ ರಾಮ

ಜಯತು ದಶರಥ ರಾಮ

ಜಯತು ಸೀತಾರಾಮ ಜಯತು ರಘುರಾಮ

ಜಯತು ಜಯತು ||ಪ||


ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ

ಪ್ರೀತಿಯಿಂದಲಿ ತಂದು ಸಕಲ ಭೂತಳವ

ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ

ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ||೧||


ಬಲಿಯೋಳ್ ದಾನವ ಮಾಡಿ ನೆಲನ ಈರಡಿ ಮಾಡಿ

ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ

ಲಲನೆಗೋಸುಗ ಬಂದ ನೆವದಿಂದ ರಾವಣನ

ತಲೆಗಳನು ಚೆಂಡಾದಿ ಮೆರೆದ ರಘುರಾಮ ||೨||


ವಸುದೇವ ಸುತನೆನಿಸಿ ವನಿತೆಯರ ವ್ರತಗೆಡಿಸಿ

ಎಸೆವ ತುರಗವನೇರಿ ಮಲ್ಲರನು ಸವರಿ

ವಸುಧೆಯೊಳು ಪುರಂದರವಿಠಲ ನೀ ಪಾಲಿಸ್ಯೆ

ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು