ಜಯ ಮಂಗಲಾ ದತ್ತ ಗುರುವರಗೆ - Jaya Mangala Datta Guruvarage

|| ಶ್ರೀ ಗುರು ದತ್ತಾತ್ರೇಯ ಮಂಗಳ ||




ಜಯ ಮಂಗಲಾ ದತ್ತ ಗುರುವರಗೆ |

ಜಯಶ್ರೀಪಾದ ನರಸಿಂಹ ಯತಿವರಗೆ |

ಜಯ ಪ್ರತ್ಯಗಾತ್ಮಾ ನಿರಾಮಯಗೆ |

ಜಯ ಭಕ್ತೋದ್ಧರಾ ದತ್ತರಾಜನಿಗೆ


ಅನಸೂಯಾತನಯ ದೇವನಿಗೆ |

ಘನ ಮೂರ್ತಿ ಅವಧೂತನಿಗೆ ||

ಮನದಲ್ಲೇ ಸ್ಮರಿಸೆ ಬರುವವಗೆ |

ಮನಕಾನಂದ ನೀಡುವ ಮುನಿಗೆ ||

ನರಸೋಬವಾಡಿ ನಿವಾಸನಿಗೆ |

ವರಕೃಷ್ಣಾನದೀ ತೀರದಾಸನಿಗೆ ||


ವರಪೀಠಾಪುರದಿ ಜನಿಸಿದಗೆ |

ದೊರೆ ಶ್ರೀಪಾದ ಶ್ರೀವಲ್ಲಭಗೆ ||

ಕುರುದ್ವೀಪಾಧಿವಾಸ ಸನ್ನುತಗೆ |

ಪರಮಾನಂದ ಸುಂದರ ಯತಿಗೆ |

ಔದುಂಬರಾ ವಾಸನಾದವಗೆ |

ಸದಯಾತ್ಮಾ ಸದಾ ಭಕ್ತಪಾಲನಿಗೆ ||


ಸತಿ ಅಂಬಾ ಮಾಧವ ಕಂದನಿಗೆ |

ಯತಿ ನರಸಿಂಹ ಸರಸ್ವತಿಗಳಿಗೆ ||

ಕ್ಷಿತಿಯೊಳ್ ಗಾಣಗಾಪುರದೊಳಗೆ |

ಅತಿಪ್ರೇಮದಿ ನೆಲೆನಿಂತವಗೆ ||

ಭೀಮಾನದೀತೀರ ಸಂಚರಗೆ |

ಕಾಮಿತಾರ್ಥ ಪ್ರದಾಯಕ ಮೂರುತಿಗೆ ||


ಸಚ್ಚಿದಾನಂದ ಶ್ರೀಶಂಕರಗೆ |

ಅಚ್ಯುತಾನಂತ ಸರ್ವಾತ್ಮನಿಗೆ ||

ಮೆಚ್ಚಿ ಸಂಗೀತಕೊಲಿಯುವವನಿಗೆ |

ಹೆಚ್ಚಿನಾನಂದವನು ಕೂಡುವವಗೆ ||

ಶ್ರೀ ಸಂಗಮಾವಾಸ ನರಹರಿಗೆ |

ಈಶ ಶ್ರೀ ದತ್ತ ನಾಮಾಮೃತಾತ್ಮನಿಗೆ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು