|| ಶ್ರೀ ಕೃಷ್ಣ ಭಜನೆ ||
ಕಾಳಿಂಗನಾ ಮೆಟ್ಟಿ ನಾಟ್ಯವಾಡಿದ
ಕಂಜನಾಭ ಕೃಷ್ಣನು ||ಪ||
ಭರದಲ್ಲಿ ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ
ತರಳತನದಲ್ಲಿ ಯಮುನೆಯ ಮಡುವಿನಲ್ಲಿ
ಆಡುತ್ತ ಪಾಡುತ್ತ ||ಅ.ಪ.ll
ಕಾಳಿಂಗನಾ ಮೆಟ್ಟಿ ಆಡಿದ
ಕಾಲಲಿ ಗೆಜ್ಜೆ ಘಲುಘಲು ಘಲು
ಕೆನ್ನೆ ಫಾಲದಿ ತಿಲಕವು ಹೊಳೆ ಹೊಳೆಯುತ್ತ
ಜ್ವಲಿತ ಮಣಿಮಯ ಲಲಿತ ಪದಕಹಾರ
ಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ||1||
ಸುರರು ದುಂದುಭಿಯ ಢಣಢಣ ಢಣರೆಂದುಮೊರೆಯೆ
ತಾಳಗಳು ಝಣಝಣ ಝಣಾರೆಂದು
ಹರಬ್ರಹ್ಮ ಸುರರು ತಥೋತಥೆಯೆನ್ನಲು
ನಾರದ ತುಂಬುರ ಸಿದ್ದರು ವಿದ್ಯಾಧರರು
ಅಂಬರದಲ್ಲಿ ಆಡುತ್ತ ಪಾಡಲು||2||
ಯೋಗಿಗಳೆಲ್ಲ ಜಯ ಜಯ ಜಯಯೆನ್ನೆ
ಭೋಗಿಗಳೆಲ್ಲ ಭಯಭಯ ಭಯವೆನ್ನೆ
ನಾಗಕನೈಯರು ಅಭಯ ಅಭಯವೆನ್ನೆ
ನಾಗಶಯನ ಸಿರಿಕೃಷ್ಣ ಜನನಿಯ ಕಂಡುಬೇಗನೆ
ಬಿಗಿದಪ್ಪಿ ಮುದ್ದನು ತೋರಿದ||3||
0 ಕಾಮೆಂಟ್‌ಗಳು