|| ಶ್ರೀ ಕೃಷ್ಣ ಸ್ತುತಿ ||
ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ || ಪ ||
ದಾರದಿ ಕಟ್ಟಿಲ್ಲ ಮಾರು ಹಾಕುವದಲ್ಲ
ಕೇರಿ ಕೇರಿಗಳಲ್ಲಿ ಮಾರುವದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ || 1 ||
ರಂಗು ರಂಗುಗಳಿಂದ ಕಂಗೊಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ ಸಂಗದಿ ಮಂಗಳಕರವಾದ || 2 ||
0 ಕಾಮೆಂಟ್‌ಗಳು