|| ದುರ್ಗಾ ಸ್ತುತಿ ||
ರಾಗ : ಜನರಂಜಿನಿ
ಪಾಹಿಮಾಂ ಶ್ರೀ ರಾಜರಾಜೇಶ್ವರಿ |
ಕೃಪಾಕರಿ ಶಂಕರಿ ಪಾಹಿಮಾಂ || ಪ ||
ಸೌಪರ್ಣಿಕಾ ನದಿ ಅಭಿಷೇಕ
ಸ್ವೀಕರಿಸು ಅಂಬಿಕಾ
ಕೊಡಚಾದ್ರಿ ಗುಡಿಯಲ್ಲಿ ಕಡುಕರುಣಿ ಮೈದಾಳಿ
ಬಂದಂಥ ಮೂಕಾಂಬಿಕ | ಕೊಲ್ಲೂರ ಮೂಕಾಂಬಿಕ
ಶ್ರೀದೇವಿ ಮೂಕಾಂಬಿಕ || ೧ ||
ಓ ಜಗನ್ನಾಯಕಿ ಅಂಬಿಕೆಯೆ |
ಮೂಕಾಸುರ ವಧೆ ಗೈದವಳೆ ||
ಪ್ರಕೃತ ರೂಪಿಣಿ | ಶ್ರೀ ಭದ್ರಕಾಳಿನಿ
ಜ್ವಾಲಾ ಮಾಲಿನಿ ಜಗಜ್ಜನನೀ ||೨||
ಶ್ರೀ ಪರಮೇಶ್ವರಿ ಪರಮ ಕೃಪಾಕರಿ |
ಕೊಲ್ಲೂರಲ್ಲಿಹ ಈಶ್ವರಿಯೇ ||
ಶಾಂತ ಸ್ವರೂಪಿಣಿ ತ್ರಿಶೂಲಧಾರಿಣಿ |
ಮಾಯಾ ಮೋಹಿನಿ ಮಾತೃರೂಪಿಣಿ II೩II
0 ಕಾಮೆಂಟ್‌ಗಳು