|| ಮಹಾಲಕ್ಷ್ಮೀ ಆರತಿ ಹಾಡು ||
ಆರುತಿ ಬೆಳಗಿರೆ ಮಾರಮಣಗೆ ವರನಾರಿಯರು
ಎಂಬಂತೆ ಆರತಿ ಬೆಳಗಿರೆ ನಾರಿಯರು ಬೇಗ |
ಅದಿ ಕೊಲ್ಲಾಪುರದ ಮಹಾಲಕ್ಷ್ಮಿಗೆ |
ಹಾಡುತ ಜಾಣೆಯರೆಲ್ಲರು|
ಆದಿ ನಾರಾಯಣ ಪ್ರಿಯಳಿಗೆ||ಪ||
ಪಿಲ್ಲೆ ಕಾಲುಂಗುರ ಲುಲ್ಲು ಪೈಜನರುಳಿ |
ಗಿಲ್ಲ ಗಿಲ್ಲೆಂದು ಹೆಜ್ಜೆಯನಿಡುತ ||
ಉಲ್ಲಾಸದಿಂದಲಿ ನಡುವಿಗೊಡ್ಯಾಣ |
ಪುಲ್ಲ ನಾಭನ ಪ್ರಿಯಳಿಗೆ ||೧||
ಜರದ ಪಿತಾಂಬರ ನಿರಿಗೆಗಳಲೆಯುತ |
ಝಗಝಗಿಯಿಂದ ಹೊಳೆಯುತಲಿ ||
ತೊಟ್ಟ ಕಂಚುಕವನು ಇಟ್ಟ ವಂಕಿಯ ತೊಡೆ |
ಬೆಟ್ಟದ ವೇಂಕೋಬನ ಮಡದಿಗೆ ||೨||
ಚೌರಿ ರಾಗುಟಿ ಗೊಂಡೆ ಹೆರಳು ಬಂಗಾರ |
ಬುಗಡಿ ವಾಲಿಗಳು ಹೊಳೆಯುತಲಿ |
ಸಡಗರದಿಂದ ಕುಡಿಯ ಕುಂಕುಮ ಹಚ್ಚಿ |
ಒಡೆಯ ವೇಂಕೋಬನ ಮಡದಿಗೆ ||೩||
0 ಕಾಮೆಂಟ್‌ಗಳು