ಜಯ ಜಯ ಕಪಿವರ್ಯಾ ಶ್ರೀ ಹನುಮಂತ - Jaya Jaya Kapivarya

|| ಹನುಮಂತ ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com, belaguru Maruti images, belaguru Anjaneya images 


ಜಯ ಜಯ ಕಪಿವರ್ಯಾ ಶ್ರೀಹನುಮಂತ |

ವಾಯುಪುತ್ರ ಶ್ರೀರಾಮ ನಿಜದೂತ ||ಪ||


ಬಾಲಕನಾಗಿ ದಿನಕರನೆಡೆಗೆ ಜಿಗಿದ |

 ವಜ್ರಾಯುಧದಿ ದವಡೆಯ ಸಿಡಿದು

ಹರಿಮತವೇ ತನ್ನ ಮತವೆಂದ | |೧||


ನಿಸ್ಸೀಮ ಬಲದಿ ಲಂಕೆಗೆ ಲಂಘಿಸಿ

ಸೀತೆಗೆ ಅಂಗುಲೀಯನಿತ್ತಾ ಆಂಜನೇಯ ||

ಸಂಜೀವಿನಿಯ ತಂದ ಬಲವೀರ್ಯ ||೨||


ಲಕ್ಷ್ಮಣ ಪ್ರಾಣದಾತ, ಸಚ್ಛಾಸ್ತ್ರಗಳರಿತವ |

ಸಮಸ್ತ ಕಲ್ಯಾಣಗುಣನಿಧಿ |

ಶ್ರೀಕೃಷ್ಣ ವಿಠ್ಠಲನಿಂದ ನಿಜಭಕುತಿಯ ಬೇಡಿದ||೩||


|

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು