ಜಯ ಮಂಗಳಂ ನಿತ್ಯ ಶುಭ ಮಂಗಳಂ - Jaya Mangalam Nitya Shubha Mangalam


 || ಮಂಗಳ ಸ್ತುತಿ ||

ರಾಗ :ಸೌರಾಷ್ಟ್ರ



ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||



ಮಕುಟಕೆ ಮಂಗಳ ಮತ್ಯಾವತಾರಗೆ

ಮುಖಕೆ ಮಂಗಳ ಮುದ್ದು ಕೂರ್ಮನಿಗೆ

ಸುಕಂಠಕ್ಕೆ ಮಂಗಳ ಸೂಕರ ರೂಪಗೆ

ನಖಗೆ ಮಂಗಳ ಮುದ್ದು ನರಸಿಂಹಗೆ ||೧||



ವಕ್ಷಕೆ ಮಂಗಳ ವಟು ವಾಮನನಿಗೆ

ಪಕ್ಷಕೆ ಮಂಗಳ ಭಾರ್ಗವನಿಗೆ

ಕಕ್ಷಕೆ ಮಂಗಳ ಕಾಕುಸ್ಥ ರಾಮನಿಗೆ

ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ ||೨||



ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ

ಚರಣಕೆ ಮಂಗಳ ಸಿರಿ ಕಲ್ಕಿಗೆ

ಪರಿಪರಿ ರೂಪಕೆ ಪರಮ ಮಂಗಳ ನಮ್ಮ

ಪುರಂದರವಿಠಲಗೆ ಶುಭಮಂಗಳ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು